ಜನಸಾಮಾನ್ಯರಿಗೆ ಇಲ್ಲದ ಹಲವು ಅನುಕೂಲತೆಗಳು ಅದಾನಿಗೆ ಇರುವುದರಿಂದ ಯಾವುದೇ ಸವಾಲನ್ನೂ ಎದುರಿಸುವುದು ಸುಲಭ. ಪ್ರಧಾನಿಯೊಂದಿಗೆ ನೇರವಾಗಿ ಮಾತನಾಡುವ ಸಾಮರ್ಥ್ಯ ಅದಾನಿಗಿದೆ. ಕೇಂದ್ರದ ಸಚಿವರು, ಸಂಸದರು, ಶಾಸಕರುಗಳೆಲ್ಲ ಒಂದು ಫೋನ್ ಕಾಲ್‍ಗೆ ಸಿಗುವಷ್ಟು ಮತ್ತು ತಕ್ಷಣ ಸ್ಪಂದಿಸುವಷ್ಟು ಅವರ ಹತ್ತಿರವಿದ್ದಾರೆ. ಅದಾನಿಯನ್ನು ಈ ದೇಶದ ಸಂಪತ್ತು ಎಂದು ಪ್ರಭುತ್ವ ಪರಿಗಣಿಸಿರುವುದರಿಂದ, ಪ್ರಭುತ್ವದ ಹಲವಾರು ರಿಯಾಯಿತಿಗಳು ಅವರಿಗೆ ಸುಲಭವಾಗಿ ದಕ್ಕಬಲ್ಲುದು. ಅವರ ಪ್ರಯಾಣ ವಿಮಾನದಲ್ಲಿ ಮತ್ತು ದುಬಾರಿ ಕಾರುಗಳಲ್ಲಿ. ಕೋಟು-ಬೂಟು-ಸೂಟುಗಳಲ್ಲಿ ಸದಾ ಮಿನುಗುವ ಇವರಿಗೆ ಸಕಲ ಸರ್ಕಾರಿ ಮರ್ಯಾದೆಗಳೂ ಲಭ್ಯವಾಗುತ್ತಲೇ ಇರುತ್ತವೆ. ಅದಾನಿಯವರ ಅಧಿಕಾರಿಯೋರ್ವ ಸರ್ಕಾರಿ ಕಚೇರಿ, ಬ್ಯಾಂಕು ಇತ್ಯಾದಿಗಳಲ್ಲಿ ಗಿಟ್ಟಿಸಿಕೊಳ್ಳುವ ಗೌರವದ ಒಂದು ಶೇಕಡವನ್ನೂ ಜನಸಾಮಾನ್ಯ ಪಡೆಯುವುದಿಲ್ಲ. ಇಂಥ ಅನುಕೂಲತೆಗಳು ಅದಾನಿಯ ಪಾಲಿಗೆ ಸದಾ ಲಭ್ಯವಾಗುತ್ತಿರುವುದರಿಂದಲೇ,
ಕಳೆದ ಒಂದೇ ವಾರದಲ್ಲಿ ತಮ್ಮ ಸಂಪತ್ತಿನಲ್ಲಿ ಸುಮಾರು 95 ಸಾವಿರ ಕೋಟಿ ರೂಪಾಯಿಯನ್ನು ಅವರು ಕಳಕೊಂಡಿರುವುದು ಸಾರ್ವಜನಿಕರನ್ನು ಚಿಂತೆಗೀಡು ಮಾಡಿರುವುದಕ್ಕೆ ಸಾಧ್ಯವಿಲ್ಲ. ಅದಾನಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದ ಅಲ್ಬುಲಾ ಇನ್ವೆಸ್ಟ್‍ಮೆಂಟ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‍ಮೆಂಟ್ ಫಂಡ್ ಎಂಬ ಮೂರು ವಿದೇಶಿ ಫಂಡ್‍ಗಳ ವಿರುದ್ಧ ನ್ಯಾಶನಲ್ ಸೆಕ್ಯುರಿಟೀಸ್ ಡೆಪಾಸಿಟ್ ಲಿಮಿಟೆಡ್ ಕ್ರಮ ಕೈಗೊಂಡ ನಂತರ ಅದಾನಿ ಕಂಪೆನಿಯ ಷೇರುಗಳು ಸತತವಾಗಿ ಕುಸಿದು ಒಂದೇ ವಾರದಲ್ಲಿ ಅವರಿಗೆ 95 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ಈ ಸುದ್ದಿ ಪ್ರಕಟವಾದ ದಿನವೇ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿರುವುದು ಕೂಡಾ ಸು ದ್ದಿಯಾಗಿದೆ. ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಗದಗ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಡಿಕೇರಿ, ಮಂಡ್ಯ, ಚಾಮರಾಜನಗರ ಮತ್ತು ಇನ್ನಿತರ ಹಲವು ಪ್ರದೇಶಗಳು ಕೂಡ ಪೆಟ್ರೋಲ್ ಬೆಲೆಯನ್ನು ಶತಕದ ಮೇಲೇರಿಸಿ ಕೂತಿವೆ. ಮುಂದಿನ ವಾರದೊಳಗೆ ರಾಜ್ಯದ ಎಲ್ಲ ಕಡೆ ಪೆಟ್ರೋಲ್ ಬೆಲೆ ನೂರು ರೂಪಾಯಿಯನ್ನು ದಾಟುವುದು ನಿಶ್ಚಿತವಾಗಿದೆ. ದುರಂತ ಏನೆಂದರೆ,

ತೈಲ ಬೆಲೆ ಏರಿಕೆಯನ್ನು ಮುಖ್ಯ ವಿಷಯವಾಗಿಸಿ 2014ರಲ್ಲಿ ಚುನಾವಣೆಯನ್ನು ಎದುರಿಸಿ ಅಧಿಕಾರಕ್ಕೆ ಬಂದ ಬಿಜೆಪಿಯೇ ಜನರ ಮೇಲೆ ಈ ಕ್ರೌರ್ಯವನ್ನು ಎಸಗುತ್ತಿದೆ ಎಂಬುದು.
2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದವರು ನರೇಂದ್ರ ಮೋದಿ. ಆಗಿನ್ನೂ ಅವರು ಗುಜರಾತಿನ ಮುಖ್ಯಮಂತ್ರಿಯಷ್ಟೇ ಆಗಿದ್ದರು. ಈ ಸಮಯದಲ್ಲಿ ಪೆಟ್ರೋಲ್ ಬೆಲೆ 70-75 ರೂಪಾಯಿ ಆಸುಪಾಸಿನಲ್ಲಷ್ಟೇ ಇತ್ತು. ಮುಖ್ಯಮಂತ್ರಿ ನರೇಂದ್ರ ಮೋದಿಯವರು ಈ ಬೆಲೆಯನ್ನೇ ಜನಸಾಮಾನ್ಯರ ಪಾಲಿನ ಹೊರಲಾಗದ ಹೊರೆ ಎಂದು ಬಾರಿ ಬಾರಿಗೂ ಭಾಷಣಗಳಲ್ಲಿ ಹೇಳಿದ್ದರು. ಈ ಸ್ಥಿತಿಗೆ ಮನಮೋಹನ್ ಸಿಂಗ್ ಸರ್ಕಾರದ ಅಸಮರ್ಥ ಆಡಳಿತವೇ ಕಾರಣ ಎಂದು ಆಪಾದಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ, ಈ ಬೆಲೆ ಏರಿಕೆಯ ಬವಣೆಯಿಂದ ಜನರನ್ನು ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ಹೀಗೆ ಹೇಳುವಾಗ ಅಪ್ಪಿ-ತಪ್ಪಿಯೂ ಅವರು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗಿನ ಕಚ್ಚಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 125 ಡಾಲರ್ ಇದೆ ಎಂದು ಹೇಳುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಮೋದಿಯವರು ಸ್ವಿಸ್ ಬ್ಯಾಂಕ್‍ನಲ್ಲಿರುವ ಸಂಪತ್ತಿನ ಮೂಟೆಯ ಬಗ್ಗೆಯೂ ಮಾತಾಡಿದ್ದರು. ಅಲ್ಲಿರುವ ಹಣವೆಲ್ಲ ಕಾಂಗ್ರೆಸಿಗರದ್ದು ಮತ್ತು ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿರುವ ಹಣವನ್ನು ಭಾರತಕ್ಕೆ ಮರಳಿ ತರಲಾಗುವುದು ಎಂದೂ ಹೇಳಿದ್ದರು. ನೆಹರೂರಿಂದ ಹಿಡಿದು ಸೋನಿಯಾ ಗಾಂಧಿಯ ವರೆಗೆ ಕಾಂಗ್ರೆಸಿಗರೆಲ್ಲ ಸ್ವಿಸ್ ಬ್ಯಾಂಕ್‍ನಲ್ಲಿ ಹಣವನ್ನು ತುಂಬಿಸಿಟ್ಟಿz್ದÁರೆ ಎಂಬ ಭಾವವನ್ನು ಸೃಷ್ಟಿಸುವಲ್ಲಿ ಬಿಜೆಪಿ ಸಾಕಷ್ಟು ಶ್ರಮಿಸಿತ್ತು. ಅಲ್ಲದೇ,
ಸುಶ್ಮಾ ಸ್ವರಾಜ್‍ರಿಂದ ಹಿಡಿದು ಬಿಜೆಪಿಯ ಪ್ರಮುಖ ನಾಯಕರು ಖಾಲಿ ಸಿಲಿಂಡರ್‍ಗಳನ್ನು ಪ್ರದರ್ಶಿಸಿ, ಬಟಾಟೆ, ನೀರುಳ್ಳಿಯಂಥ ಅಗತ್ಯ ವಸ್ತುಗಳ ಹಾರವನ್ನು ಕೊರಳಿಗೆ ಹಾಕಿ ಜನಸಾಮಾನ್ಯರ ಬವಣೆಗಳನ್ನು ಸರ್ಕಾರದ ಎದುರು ಇಟ್ಟಿದ್ದರು. ಹಾಗಂತ,
ಒಂದು ಜಾಗೃತ ವಿರೋಧ ಪP್ಷÀವಾಗಿ ಬಿಜೆಪಿಯ ಈ ನಡೆಯನ್ನು ಶ್ಲಾಘಿಸಬೇಕು. ಹಾಗೆಯೇ, ಈ ಪ್ರತಿಭಟನೆ ಜನಸಾಮಾನ್ಯರ ಪಾಲಿಗೆ ಇನ್ನೊಂದು ಸಂತಸದ ಸಂದೇಶವನ್ನೂ ರವಾನಿಸುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಗತ್ಯ ವಸ್ತುಗಳು ಅಗ್ಗವಾಗುತ್ತವೆ ಮತ್ತು ತೈಲ, ಗ್ಯಾಸ್ ಸಿಲಿಂಡರ್ ಸಹಿತ ನಿತ್ಯ ಬಳಕೆಯ ವಸ್ತುಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ ಎಂಬುದೇ ಆ ಸಂದೇಶ. ಆದರೆ ಮುಖ್ಯಮಂತ್ರಿ ಮೋದಿಯವರು ಪ್ರಧಾನಿ ಮೋದಿಯಾಗಿ ಈಗ 7 ವರ್ಷಗಳು ಕಳೆದಿವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ ಒಂದಕ್ಕೆ 125 ಡಾಲರ್‍ನಿಂದ ಇಳಿದು 35ಕ್ಕೆ ಇಳಿದದ್ದಿದೆ. ಈಗ 70 ಡಾಲರ್‍ನ ಆಸು-ಪಾಸಿನಲ್ಲಿದೆ. ಹೀಗಿದ್ದೂ,

ತೈಲ ಬೆಲೆಯಲ್ಲಿ ಯಾಕೆ ಇಳಿಕೆಯಾಗುತ್ತಿಲ್ಲ? ಗ್ಯಾಸ್ ಸಿಲಿಂಡರ್‍ನ ಬೆಲೆ 850 ರೂಪಾಯಿಗಿಂತಲೂ ಅಧಿಕ ಏರಿರುವುದೇಕೆ? ಮ ನ್‍ಮೋಹನ್ ಸಿಂಗ್ ಅವಧಿಯಲ್ಲಿ 350-400 ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರನ್ನು ಇದೀಗ ಪ್ರಧಾನಿ ಮೋದಿಯವರು ಜ ನಸಾಮಾನ್ಯರ ಕೈಗೆ ಸಿಗದಷ್ಟು ಎತ್ತರದಲ್ಲಿ ಇರಿಸಿರುವುದೇಕೆ? ಅಗತ್ಯ ವಸ್ತುಗಳ ಬೆಲೆಯಂತೂ ಮನ್‍ಮೋಹನ್ ಕಾಲಕ್ಕೆ ಹೋಲಿಸಿದರೆ ಮೂರು ಪಟ್ಟು ಅಧಿಕವಾಗಿದೆ. ಹಾಗೆಯೇ,
ಜನಸಾಮಾನ್ಯರ ಆದಾಯದಲ್ಲಿ ಏರಿಕೆಯಾಗುವ ಬದಲು ವರ್ಷಂಪ್ರತಿ ಇಳಿಕೆಯಾಗುತ್ತಿದೆ. ಈ ಇಳಿಕೆಯ ಪರ್ವ ಆರಂಭವಾದದ್ದು 2017ರ ನೋಟ್‍ಬ್ಯಾನ್‍ನಿಂದ. ಕಳೆದೆರಡು ವರ್ಷಗಳ ಮಟ್ಟಿಗೆ ಹೇಳುವುದಾದರೆ, ಸುಮಾರು 4 ಕೋಟಿಯಷ್ಟು ಉದ್ಯೋಗಗಳು ನಷ್ಟವಾಗಿವೆ. ಸಣ್ಣ ಮತ್ತು ಮಧ್ಯಮ ಕಾರ್ಖಾನೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಮುಚ್ಚಿವೆ. ಉದ್ಯೋಗಿಗಳಿಗೆ ಅರ್ಧ ವೇತನವಷ್ಟೇ ಲಭ್ಯವಾಗುತ್ತಿದೆ. ನಾಲ್ಕು ಮಂದಿ ಕೆಲಸಗಾರರಿದ್ದ ಕಡೆ ಇಬ್ಬರನ್ನು ಉಳಿಸಿಕೊಂಡು ಇನ್ನಿಬ್ಬರನ್ನು ಕೈ ಬಿಡಲಾಗುತ್ತಿದೆ. ಇದೇವೇಳೆ, ಸ್ವಿಸ್ ಬ್ಯಾಂಕ್‍ನಲ್ಲಿ ಕಳೆದ 13 ವರ್ಷಗಳಲ್ಲೇ ಅತ್ಯಧಿಕ ಹಣವನ್ನು 2020ರಲ್ಲಿ ಭಾರತೀಯರು ಇಟ್ಟಿರುವ ಮಾಹಿತಿಯು ಕಳೆದವಾರದಲ್ಲಿ ಪ್ರಕಟವಾಗಿದೆ. 2020ರಲ್ಲಿ ಸ್ವಿಸ್ ಬ್ಯಾಂಕ್‍ಗಳಲ್ಲಿ ಭಾರತೀಯರ ಹಣ ಸುಮಾರು 2,076 ಕೋಟಿಗೆ ಏರಿದೆ. ಈ ಮಾಹಿತಿಯನ್ನು ನೀಡಿರುವುದೇ ಸ್ವಿಸ್ ಬ್ಯಾಂಕ್. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಸ್ವಿಸ್ ಬ್ಯಾಂಕ್‍ಗಳಿಂದ ಹೆಚ್ಚಿನ ಮಾಹಿತಿಯನ್ನೂ ಕೇಳಿದೆ. ನಿಜವಾಗಿ,
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ಯಾವ ಭರವಸೆಗಳನ್ನು ನೀಡಿ 2014ರಲ್ಲಿ ಅಧಿಕಾರಕ್ಕೆ ಬಂದಿತ್ತೋ ಆ ಎಲ್ಲ ಭರವಸೆಗಳನ್ನೂ ಅವರ ಅಧಿಕಾರಾವಧಿಯ 7 ವರ್ಷಗಳು ಸಂಪೂರ್ಣ ನುಚ್ಚುನೂರುಗೊಳಿಸಿವೆ ಎಂಬುದನ್ನು ಇವೆಲ್ಲ ಸಾರಿ ಸಾರಿ ಹೇಳುತ್ತಿವೆ. 2014ರಲ್ಲಿ ಭಾರತೀಯರ ಪರಿಸ್ಥಿತಿ ಈ 2021ಕ್ಕಿಂತ ಖಂಡಿತ ಉತ್ತಮವಿತ್ತು. ತೈಲ, ಅನಿಲ, ಅಗತ್ಯವಸ್ತುಗಳು ದುಬಾರಿಯಾಗಿದ್ದರೂ ಈ 2021ಕ್ಕೆ ಹೋಲಿಸಿದರೆ ಅದೂ ನಿಜಕ್ಕೂ ಅಗ್ಗವಾಗಿತ್ತು. ಸ್ವಿಸ್ ಬ್ಯಾಂಕ್‍ನಿಂದ ಈ 7 ವರ್ಷಗಳಲ್ಲಿ ಒಂದೇ ಒಂದು ಪೈಸೆಯನ್ನೂ ಮರಳಿ ತರಲು ಪ್ರಧಾನಿ ಮೋದಿಯವರಿಗೆ ಸಾಧ್ಯವಾಗದೇ ಇರುವುದೇ ಅವರು ಆ ಬ್ಯಾಂಕಿನ ಬಗ್ಗೆ ಮತ್ತು ಕಾಂಗ್ರೆಸ್ಸಿಗರ ಬಗ್ಗೆ ಸುಳ್ಳು ಹೇಳಿದ್ದರು ಎಂಬುದಕ್ಕೆ ಸಾಕ್ಷಿ. ಇದೀಗ ಪ್ರಧಾನಿ ಮೋದಿಯವರ ಕಣ್ಣೆದುರಲ್ಲೇ ಸ್ವಿಸ್ ಬ್ಯಾಂಕ್‍ನಲ್ಲಿ ಈ ಹಿಂದೆಂದಿಗಿಂತಲೂ ಅಧಿಕ ಠೇವಣಿ ಜಮೆಯಾಗಿದೆ. ಇವೆಲ್ಲ ಏನು? ಇದಕ್ಕಾಗಿ ಮನ್‍ಮೋಹನ್ ಸಿಂಗ್‍ರನ್ನು ಬದಲಿಸಿ ನರೇಂದ್ರ ಮೋದಿಯನ್ನು ತರಬೇಕಾದ ಅಗತ್ಯ ಇತ್ತೇ?