14, 13, 10, 8, 5.. ಉಪವಾಸ ನಿರತ ದೆಹಲಿಯ ಹೊಟೇಲ್ ಕಾರ್ಮಿಕ ಅರ್ಶದ್‍ನಿಗೆ ಬಲವಂತದಿಂದ ಚಪಾತಿ ತಿನ್ನಿಸಿದ ಶಿವಸೇನೆಯ ಸಂಸದರ ಗುಂಪಿನ ಮೇಲಿರುವ ಕ್ರಿಮಿನಲ್ ಕೇಸುಗಳಿವು. ಗುಂಪಿನಲ್ಲಿದ್ದ 11 ಸಂಸದರ ಪೈಕಿ ಹತ್ತು ಮಂದಿಯ ಮೇಲೆಯೂ ಕ್ರಿಮಿನಲ್ ಕೇಸುಗಳಿವೆ. ಚಪಾತಿ ತಿನ್ನಿಸಿದ ಸಂಸದ ರಾಜನ್ ವಿಚಾರೆಯ ಮೇಲಂತೂ ದೊಂಬಿ, ಕೋಮುಗಲಭೆಗೆ ಸಂಬಂಧಿಸಿದಂತೆ 13 ಕೇಸುಗಳಿವೆ. ಆದರೆ ಕಾರ್ಮಿಕ ಅರ್ಶದ್‍ನ ಮೇಲೆ ಯಾವ ಕೇಸೂ ಇಲ್ಲ. ಇದಕ್ಕೆ ಏನೆನ್ನಬೇಕು? ಒಂದು ವೇಳೆ ಅಪ್ಪಟ ಸಸ್ಯಾಹಾರಿ ಹಿಂದೂ ಕಾರ್ಮಿಕನಿಗೆ ಮುಸ್ಲಿಮ್ ಸಂಸದರ ಗುಂಪೊಂದು ಗೋಮಾಂಸ ತಿನ್ನಿಸುತ್ತಿದ್ದರೆ ಇದೇ ಶಿವಸೇನೆ, ಬಿಜೆಪಿ ಮತ್ತು ಸಂಘಪರಿವಾರಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು? ಸಂಸದರನ್ನು ಬಂಧಿಸುವಂತೆ ಒತ್ತಾಯಿಸಿ ದೇಶಾದ್ಯಂತ ಅವು ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿರಲಿಲ್ಲವೇ? ‘ದೇಹದ್ರೋಹಿ ಸಂಸದರು' ಎಂದು ಕರೆಯುತ್ತಿರಲಿಲ್ಲವೇ? ಇದು ಹಿಂದೂಸ್ತಾನ, ಪಾಕಿಸ್ತಾನವಲ್ಲ..’ ಎಂಬ ಘೋಷಣೆಗಳಿಗೆ ಲೆಕ್ಕಮಿತಿಯಿರುತ್ತಿತ್ತೇ? ಅಲ್ಲಲ್ಲಿ ಗಲಭೆ, ಹಲ್ಲೆಗಳಾದ ಬಗ್ಗೆಯೂ ವರದಿಗಳು ಬರುತ್ತಿತ್ತಲ್ಲವೇ? ಮತ್ತೇಕೆ ಈ ಪ್ರಕರಣದಲ್ಲಿ ಇವೆಲ್ಲ ಮೌನವಾಗಿವೆ? ‘ಪ್ರಕರಣಕ್ಕೆ ಧಾರ್ಮಿಕ ಬಣ್ಣ ಬಳಿಯದಿರಿ, ರಾಜಕೀಯಗೊಳಿಸಬೇಡಿ’ ಎಂದು ಅವು ತೀರಾ ತಗ್ಗಿದ ದನಿಯಲ್ಲಿ ಹೇಳುತ್ತಿರುವುದೇಕೆ? ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಬಲಿಯಾದ ಕಬೀರ್ ಪ್ರಕರಣಕ್ಕೆ ಇವು ಕೊಟ್ಟ ಬಣ್ಣ ಯಾವುದಾಗಿತ್ತು? ಧಾರ್ಮಿಕವಲ್ಲವೇ? ಉತ್ತರ ಪ್ರದೇಶದಲ್ಲಿ ಮಸೀದಿ ಕಾಂಪೌಂಡನ್ನು ಧ್ವಂಸಗೊಳಿಸಲು ಆದೇಶಿಸಿದ ಜಿಲ್ಲಾಧಿಕಾರಿ ದುರ್ಗಾರನ್ನು ಬಿಜೆಪಿ ಹೇಗೆ ಬಿಂಬಿಸಿತ್ತು? ಆ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡಿರಲಿಲ್ಲವೇ? ಅಷ್ಟಕ್ಕೂ, ಜನಪ್ರತಿನಿಧಿಗಳ ವರ್ತನೆ ಹೇಗಿರಬೇಕು? ತಮ್ಮ ಅತೃಪ್ತಿಯನ್ನು ಅವರು ಹೇಗೆ ವ್ಯಕ್ತಪಡಿಸಬೇಕು?
ಶಿವಸೇನೆ-ಬಿಜೆಪಿ-ಸಂಘಪರಿವಾರಗಳು ಈ ದೇಶದಲ್ಲಿ ಈವರೆಗೆ ನಡೆದುಕೊಂಡ ರೀತಿಯನ್ನು ಎದುರಿಟ್ಟುಕೊಂಡಾಗ ಇಂಥ ಪ್ರಶ್ನೆಗಳು ಮತ್ತೆ ಮತ್ತೆ ಎದುರಾಗುತ್ತವೆ. ಅರ್ಶದ್ ಬರೇ ಮುಸ್ಲಿಮ್ ಅಷ್ಟೇ ಅಲ್ಲ, ಈ ದೇಶದ ಪ್ರಜೆ. ಈ ದೇಶದಲ್ಲಿ ಗಣೇಶನಿಗೆ ಯಾವೆಲ್ಲ ಹಕ್ಕುಗಳು ಇವೆಯೋ ಆ ಎಲ್ಲ ಹಕ್ಕುಗಳೂ ಅರ್ಶದ್‍ನಿಗೂ ಲಭ್ಯವಾಗಬೇಕು. ಇವುಗಳಲ್ಲಿ ಮಾನವೀಯ ಹಕ್ಕುಗಳು ಪ್ರಮುಖವಾದದ್ದು. ಸಂಸದರೇ ಈ ಹಕ್ಕುಗಳನ್ನು ನಿರಾಕರಿಸುತ್ತಾರೆಂದ ಮೇಲೆ ನಾವು ನಿರೀಕ್ಷೆ ಇಡುವುದಾದರೂ ಯಾರ ಮೇಲೆ? ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವುದು ಈ ಗುಂಪುಗಳೇ. ಮೋದಿಯವರ ವ್ಯಕ್ತಿತ್ವವನ್ನು ಮುಸ್ಲಿಮ್ ವಿರೋಧಿಯೆಂಬಂತೆ ಈ ಗುಂಪುಗಳ ಕಾರ್ಯಕರ್ತರು ಈ ದೇಶದಲ್ಲಿ ಧಾರಾಳ ಬಿಂಬಿಸಿದ್ದಾರೆ. ಅನಂತಮೂರ್ತಿ, ಕಾರ್ನಾಡ್, ಅಮರ್ತ್ಯ ಸೇನ್.. ಮುಂತಾದ ಸಾಹಿತಿಗಳನ್ನೇ ಅವರು ಲೇವಡಿ ಮಾಡಿದ್ದಾರೆ. ಅವರ ಸಾಹಿತ್ಯಿಕ ಅನುಭವ ಮತ್ತು ಹಿರಿಮೆಯನ್ನು ಅತ್ಯಂತ ಕ್ಷುಲ್ಲಕವಾಗಿ ಚಿತ್ರಿಸಿದ್ದಾರೆ. ಇದೀಗ ಆ ಪಟ್ಟಿಯಲ್ಲಿ ಸಾನಿಯಾ ಮಿರ್ಝಾಳನ್ನೂ ಸೇರಿಸಲಾಗಿದೆ. ಒಂದು ರೀತಿಯಲ್ಲಿ, ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅದರ ಬೆಂಬಲಿಗ ವರ್ಗವು ತನ್ನ ಟೀಕಾಕಾರರನ್ನು ಅತ್ಯಂತ ಅಸಹಿಷ್ಣುತೆಯಿಂದ ಕಂಡಿದೆ. ಮುಂಬೈಯಲ್ಲಿ 1993ರಲ್ಲಿ ನಡೆದ ಮುಸ್ಲಿಮ್ ವಿರೋಧಿ ದಂಗೆಯಲ್ಲಿ ಶಿವಸೇನೆಯು ಎಷ್ಟು ಪ್ರಭಾವಿ ಪಾತ್ರ ವಹಿಸಿತ್ತು ಎಂಬುದಕ್ಕೆ ಶ್ರೀ ಕೃಷ್ಣ ಆಯೋಗದ ವರದಿಯೇ ಪುರಾವೆ. ಇದೀಗ ಅದೇ ಪಕ್ಷದ ಸಂಸದರು ಓರ್ವ ಉಪವಾಸಿಗನಿಗೆ ಬಲವಂತದಿಂದ ಚಪಾತಿ ತಿನ್ನಿಸಿದ್ದಾರೆ. ದುರಂತ ಏನೆಂದರೆ, ಈ ಪ್ರಕರಣ ನಡೆದು ಒಂದು ವಾರದ ಬಳಿಕವಷ್ಟೇ ಮಾಧ್ಯಮಗಳಲ್ಲಿ ಅದು ಸುದ್ದಿಯಾಯಿತು. ಅದರಲ್ಲೂ ಈ ಘಟನೆ ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ಟಿ.ವಿ. ಚಾನೆಲ್‍ಗಳು ಎಚ್ಚೆತ್ತುಕೊಂಡು ವೀಡಿಯೋ ಪ್ರಸಾರ ಮಾಡಿದುವು. ಯಾಕೆ ಹೀಗಾಯಿತು? ಘಟನೆ ನಡೆದೇ ಇಲ್ಲ ಎಂದು ಆರಂಭದಲ್ಲಿ ಶಿವಸೇನೆ ಹೇಳಿರುವುದಕ್ಕೂ ಮಾಧ್ಯಮಗಳು ವರ್ತಿಸಿರುವುಕ್ಕೂ ಏನಾದರೂ ಸಂಬಂಧವಿದೆಯೇ? ಚಪಾತಿ ತಿನ್ನಿಸಿದ ಸಂಸದರು ಮಾಧ್ಯಮಗಳ ಮೇಲೂ ಪ್ರಭಾವ ಬೀರಿದರೇ? ಬೆದರಿಕೆ ಒಡ್ಡಿದರೇ? ಯಾಕೆ ಪ್ರಧಾನಿ ಮೋದಿಯವರು ಈ ಬಗ್ಗೆ ಏನೂ ಮಾತಾಡಿಲ್ಲ? ಕೇವಲ ಈ ಘಟನೆ ಎಂದಲ್ಲ, ರೈಲ್ವೇ ಬೆಲೆ ಏರಿಕೆ, ಫೆಲೆಸ್ತೀನ್‍ನ ಮೇಲೆ ಇಸ್ರೇಲಿನ ದಾಳಿ, ಪಾಕಿಸ್ತಾನದ ಹಫೀಝ್ ಸಈದ್ ಮತ್ತು ಪತ್ರಕರ್ತ ವೈದಿಕ್ ಭೇಟಿ.. ಯಾವುದರ ಬಗ್ಗೆಯೂ ಅವರು ತುಟಿ ತೆರೆಯುತ್ತಿಲ್ಲ. ಮನ್‍ಮೋಹನ್ ಸಿಂಗ್‍ರನ್ನು ಮೌನ ಮೋಹನ ಎಂದು ಗೇಲಿ ಮಾಡಿದ್ದ ಮೋದಿಯವರು ಮೌನ ಮೋದಿಯಾಗುತ್ತಿರುವುದೇಕೆ?
ಈ ದೇಶದ ಸಂಸತ್ತು ಕ್ರಿಮಿನಲ್‍ಗಳಿಂದ ತುಂಬಿಕೊಳ್ಳುತ್ತಿದೆ ಅನ್ನುವ ಕಳವಳ ವ್ಯಕ್ತವಾಗುತ್ತಿರುವ ಈ ದಿನಗಳಲ್ಲೇ ಚಪಾತಿ ಪ್ರಕರಣ ನಡೆದಿದೆ. ಗುಣಮಟ್ಟದ ಆಹಾರವನ್ನು ಸಂಸದರು ಬಯಸುವಂತೆಯೇ ಗುಣಮಟ್ಟದ ವರ್ತನೆಯನ್ನು ಸಂಸದರಿಂದ ಜನರೂ ಬಯಸುತ್ತಾರೆ. ಮಾತ್ರವಲ್ಲ, ಸಂಸದರು ಎಂಬ ಕಾರಣಕ್ಕಾಗಿ ಈ ಬಯಕೆಯ ಪಾಲು ಅಧಿಕವಿರುತ್ತದೆ. ಗುಣಮಟ್ಟದ ಆಹಾರ ಒದಗಿಸದೇ ಇರುವುದಕ್ಕೆ ಚಪಾತಿ ತಿನ್ನಿಸುವುದು ಪರಿಹಾರ ಎಂದಾದರೆ ಗುಣಮಟ್ಟದ ವರ್ತನೆ ತೋರದ ಸಂಸದರಿಗೆ ಯಾವ ರೀತಿಯ ಪರಿಹಾರವನ್ನು ನೀಡಬೇಕು? ಸಾರ್ವಜನಿಕವಾಗಿ ಥಳಿಸುವುದೇ? ಮೆರವಣಿಗೆ ನಡೆಸುವುದೇ? ನಿಜವಾಗಿ, ಸಂಸದರೆಂದರೆ ಜನಸಾಮಾನ್ಯರಂಥಲ್ಲ. ಅವರ ಹಿಂದು-ಮುಂದು ಕಣ್ಗಾವಲು ಇರುತ್ತದೆ. ಅವರನ್ನು ಮುತ್ತಿಕೊಂಡು ಜೈಕಾರ ಕೂಗುವುದಕ್ಕೆ ಅಭಿಮಾನಿಗಳಿರುತ್ತಾರೆ. ಅಧಿಕಾರಿ ವರ್ಗವು ಅಪ್ಪಣೆಗಾಗಿ ಕಾಯುತ್ತಿರುತ್ತದೆ. ಒಂದು ಹಂತದ ವರೆಗೆ ವ್ಯವಸ್ಥೆಯನ್ನು ನಿಯಂತ್ರಿಸುವ ಸಾಮರ್ಥ್ಯ ಅವರಲ್ಲಿರುತ್ತದೆ. ಅಂಥವರೇ ಓರ್ವ ಉಪವಾಸಿಗನ ಧಾರ್ಮಿಕ ಭಾವನೆಯನ್ನು ಗೌರವಿಸುವುದಿಲ್ಲವಾದರೆ ಮಾತ್ರವಲ್ಲ, ಸಾರ್ವಜನಿಕವಾಗಿಯೇ ಅವಮಾನಿಸುವುದಾದರೆ ಇನ್ನು ಅಂಥವರ ಬೆಂಬಲಿಗರು ಹೇಗೆ ನಡೆದುಕೊಂಡಾರು?
ಬಿಜೆಪಿಯು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಈ ದೇಶದಲ್ಲಿ ಧಾರಾಳ ಚರ್ಚೆಗಳಾಗಿತ್ತು. ಬಹುಶಃ ಬೇರೆ ಯಾವ ಪ್ರಧಾನಿ ಅಭ್ಯರ್ಥಿಯ ಸುತ್ತಲೂ ಆಗದಷ್ಟು ಚರ್ಚೆಗೆ ಮೋದಿ
ಒಳಗಾಗಿದ್ದರು. ಅದಕ್ಕೆ ಕಾರಣ ಮೋದಿಯೆಂಬ ಹೆಸರಾಗಿರಲಿಲ್ಲ, ಆ ಹೆಸರಿನ ವ್ಯಕ್ತಿತ್ವವಾಗಿತ್ತು. ಮೋದಿಯವರಿಗೆ ಅಂಟಿಕೊಂಡಿದ್ದ ಗುಜರಾತ್ ಹತ್ಯಾಕಾಂಡದ ಆರೋಪಗಳು ಅವರ ಪ್ರಾಮಾಣಿಕತೆಯನ್ನು ಸಂಶಯಾಸ್ಪದಗೊಳಿಸಿದ್ದುವು. ಎಲ್ಲಿಯ ವರೆಗೆಂದರೆ ಅಮೇರಿಕ, ಬ್ರಿಟನ್‍ಗಳೇ ನಿಷೇಧ ಹೇರುವಷ್ಟು. ಆದರೆ ಮೋದಿಯವರು ಈ ಎಲ್ಲ ಅನುಮಾನ-ವಿಮರ್ಶೆಗಳನ್ನು ದಾಟಿ ಪ್ರಧಾನಿಯಾದರು. ಮಾತ್ರವಲ್ಲ, ಅವರ ಗೆಲುವನ್ನು ಅವರ ಬೆಂಬಲಿಗರು ಮುಸ್ಲಿಮರ ವಿರುದ್ಧದ ಗೆಲುವೆಂಬಂತೆ ಬಿಂಬಿಸಿದರು. ಟೀಕಾಕಾರರನ್ನು ಅತ್ಯಂತ ತುಚ್ಛವಾಗಿ ನಿಂದಿಸಿದರು. ಮುಝಫ್ಫರ್ ನಗರ್ ಗಲಭೆಯ ಆರೋಪಿಯನ್ನೇ ಮೋದಿಯವರು ಮಂತ್ರಿಮಂಡಲಕ್ಕೆ ಸೇರಿಸಿಕೊಂಡರು. ಅಲ್ಲಲ್ಲಿ ಮುಸ್ಲಿಮ್ ವಿರೋಧಿ ಹಲ್ಲೆಗಳೂ ನಡೆದುವು. ಇದೀಗ ಅವರ ಮಿತ್ರರು ಓರ್ವ ಉಪವಾಸಿಗನಿಗೆ ಚಪಾತಿಯನ್ನು ಬಲವಂತವಾಗಿ ತಿನ್ನಿಸಿದ್ದಾರೆ. ಆ ಮೂಲಕ ಈಗಾಗಲೇ ಇರುವ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ಒದಗಿಸಿದ್ದಾರೆ. ನಿಜವಾಗಿ ಚಪಾತಿಯನ್ನು ತಿನ್ನುವುದರಿಂದ ಕಳಕೊಳ್ಳುವುದಕ್ಕೆ ಅರ್ಶದ್‍ನಲ್ಲಿ ಏನೂ ಇರಲಿಲ್ಲ. ಉಪವಾಸ ಭಂಗವೂ ಆಗುವುದಿಲ್ಲ. ಆದರೆ, ಆ ಸಂಸದರು ಆ ಒಂದು ಚಪಾತಿಯ ಮೂಲಕ ಎಲ್ಲವನ್ನೂ ಕಳಕೊಂಡಿದ್ದಾರೆ. ಆ ಚಪಾತಿಯ ಬೆಲೆಗಿಂತಲೂ ಅವರ ಬೆಲೆ ಕುಸಿದಿದೆ. ಈ ಕಾರಣಕ್ಕಾಗಿ ಅರ್ಶದ್‍ನನ್ನು ನಾವು ಅಭಿನಂದಿಸಬೇಕಾಗಿದೆ.