2021 ಜುಲೈ 26ರಂದು ಜಪಾನ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವುದಕ್ಕಿAತ ವಾರಗಳ ಮೊದಲು ಯೂರೋ 2021 ಬೀಚ್ ಹ್ಯಾಂಡ್‌ಬಾಲ್ 2021 ಪಂದ್ಯಾಟ ನಡೆದಿತ್ತು. ಯುರೋಪಿಯನ್ ರಾಷ್ಟçಗಳ ನಡುವಿನ ಬಹಳ ಪ್ರಸಿದ್ಧ ಮತ್ತು ಭಾರೀ ಪ್ರೇP್ಷÀಕರನ್ನು ಹೊಂದಿರುವ ಪಂದ್ಯಾಟ ಇದು. ಜುಲೈ 18ರಂದು ಸ್ಪೆÊನ್ ಮತ್ತು ನಾರ್ವೆ ಮಹಿಳಾ ತಂಡಗಳ ನಡುವೆ ಪಂದ್ಯಾಟ ನಡೆಯಿತು. ಆದರೆ ಈ ಪಂದ್ಯ ಆಟಕ್ಕಿಂತ ಹೆಚ್ಚು ಈ ಆಟದಲ್ಲಿ ನಾರ್ವೆ ಮಹಿಳಾ ಆಟಗಾರ್ತಿಯರು ಧರಿಸಿದ ಬಟ್ಟೆಗಾಗಿ ಸುದ್ದಿಯಾಯಿತು. ಅಂತಾರಾಷ್ಟಿçÃಯ ಬೀಚ್ ಹ್ಯಾಂಡ್‌ಬಾಲ್ ಫೆಡರೇಶನ್ ನಿಯಮದ ಪ್ರಕಾರ, ಆಟಗಾರ್ತಿಯರು ಬಿಕಿನಿ ಬಾಟಮ್ ದಿರಿಸನ್ನು ಧರಿಸುವುದು ಕಡ್ಡಾಯ. ದಿರಿಸಿನ ಕೆಳಭಾಗವು ಮೈಗೆ ಆಂಟಿಕೊAಡಿರಬೇಕು. ವಿ ಆಕಾರದಲ್ಲಿ ಈ ಬಿಕಿನಿಯ ಕೆಳಭಾಗ ಇರಬೇಕು. ದಿರಿಸಿದ ಬಗ್ಗೆ ಈ ನಿಯಮ ಎಷ್ಟು ನಿಖರವಾಗಿದೆಯೆಂದರೆ, ಬಿಕಿನಿಯ ಕೆಳಭಾಗವು ಗರಿಷ್ಠವೆಂದರೆ, 10 ಸೆ.ಮೀಟರ್ ಇರಬಹುದು. ಅದಕ್ಕಿಂತ ಹೆಚ್ಚು ಇರುವುದು ಕಾ ನೂನುಬಾಹಿರ. ವಿಶೇಷ ಏನೆಂದರೆ,
ನಾರ್ವೆ ಆಟಗಾರ್ತಿಯರು ಈ ಬಿಕಿನಿಯಲ್ಲಿ ನಾವು ಆಡುವುದಿಲ್ಲ ಎಂದು ಹಠ ಹಿಡಿದರು. ಬಿಕಿನಿಯ ಬದಲು ಅಥ್ಲೆಟಿಕ್ ಶಾರ್ಟ್ಸ್ ಧರಿಸಿ ಆಡಿದರು. ಅಷ್ಟಕ್ಕೇ ಮುಗಿಯಲಿಲ್ಲ. ಹೀಗೆ ಬಿಕಿನಿ ಧರಿಸಲು ಒಪ್ಪದ ನಾರ್ವೆಯನ್ ತಂಡದ ಒಬ್ಬೊಬ್ಬ ಆಟಗಾರ್ತಿಗೆ ಹ್ಯಾಂಡ್‌ಬಾಲ್ ಫೆಡರೇಶನ್ 177 ಡಾಲರ್ ದಂಡ ವಿಧಿಸಿ ಸೇಡು ತೀರಿಸಿಕೊಂಡಿತು. ಹಾಗಂತ,
ಈ ಡ್ರೆಸ್ ಕೋಡ್ ಹೆಣ್ಣಿಗೆ ಮಾತ್ರ. ಪುರುಷರ ಹ್ಯಾಂಡ್‌ಬಾಲ್ ಪಂದ್ಯಾಟಕ್ಕೆ ದಿರಿಸಿಗೆ ಸಂಬAಧಿಸಿ ಇಂಥ ಕಠಿಣ ನಿಬಂಧನೆಗಳಿಲ್ಲ. ಅವರು ಮೈಗೆ ಅಂಟಿಕೊಳ್ಳದ ಶಾರ್ಟ್ಸ್ ಧರಿಸಿ ಆಡಬಹುದು.
2018ರ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಮೆಂಟ್‌ನಲ್ಲೂ ಇಂಥz್ದೆÃ ಒಂದು ಘಟನೆ ನಡೆಯಿತು. ಅತಿ ಕಡಿಮೆ, ಅತಿ ಕಿರಿದು ಮತ್ತು ಅತಿ ತೆಳು ಬಟ್ಟೆ ಧರಿಸಿ ಆಡುವುದಕ್ಕೆ ಎಂದೂ ಹಿಂಜರಿಕೆ ತೋರದ ಅಮೇರಿಕದ ಮಹಿಳಾ ಟೆನ್ನಿಸ್ ಸ್ಟಾರ್ ಸೆರೆನಾ ವಿಲಿಯಮ್ಸ್ ಅವರು ಮೊದಲ ಬಾರಿ ಯೆಂಬAತೆ ದೇಹವಿಡೀ ಮುಚ್ಚುವ ಕಪ್ಪು ಕ್ಯಾಟ್-ಸೂಟ್ ಧರಿಸಿ ಆಡಿದ್ದರು. ಇದು ಫ್ರೆಂಚ್ ಓಪನ್ ಆಯೋಜಕರ ಆಕ್ಷೇಪಕ್ಕೆ ಗುರಿಯಾಯಿತು. ಇಂಥ ಡ್ರೆಸ್ಸನ್ನು ಒಪ್ಪಲಾಗದು ಎಂದ ಫ್ರೆಂಚ್ ಟೆನ್ನಿಸ್ ಫೆಡರೇಶನ್‌ನ ಅಧ್ಯP್ಷÀ ಬರ್ನಾರ್ಡ್ ಗ್ರೆಡಿಸೆಲ್ಲಿ ಹೇಳಿದರು. ಮುಂದಿನ ವರ್ಷದಿಂದ ಇಂಥ ಡ್ರೆಸ್ ಧರಿಸಿ ಆಡುವುದನ್ನು ನಿಷೇಧಿಸಲಾಗುವುದು ಎಂದೂ ಹೇಳಿದರು.
1985ರಲ್ಲಿ ಇಂಥz್ದÉÃ ಇನ್ನೊಂದು ಘಟನೆ ನಡೆಯಿತು. ಅದು ವಿಂಬಲ್ಡನ್ ಮಹಿಳಾ ಟೆನ್ನಿಸ್ ಟೂರ್ನಮೆಂಟ್. ಅಮೇರಿಕದ ಆಟಗಾತಿ ಅನ್ನ ವೈಟ್, ಲಂಗ-ಧಾವಣಿಯAಥ ಉದ್ದ ಸ್ಲೀವ್ ಇರುವ ದಿರಿಸು ಧರಿಸಿ ಪ್ರಥಮ ಸುತ್ತಿನ ಪಂದ್ಯಾಟಕ್ಕೆAದು ಅಂಗಣ ಪ್ರವೇಶಿಸಿದ್ದರು. ಆಗ ಇದನ್ನು ಪಂದ್ಯದ ರೆಫ್ರಿ ಆಕ್ಷೇಪಿಸಿದ್ದರು. ಇದಕ್ಕಿಂತ ಹೆಚ್ಚು ಸೂಕ್ತವಾದ ಧಿರಿಸು ಧರಿಸಿ ಆಡಬೇಕೆಂದು ತಾಕೀತು ಮಾಡಿದ್ದರು. ನಿಜವಾಗಿ,
ಅತೀವ ಪ್ರಗತಿಪರರೆಂದು ಜಂಭ ಕೊಚ್ಚಿಕೊಳ್ಳುತ್ತಿರುವ ಈ ರಾಷ್ಟçಗಳ ಮಹಿಳಾ ಶೋಷಕ ನೀತಿಗಳು ಈ ಹೊತ್ತಿನಲ್ಲಿ ಚರ್ಚೆಗೆ ಬರಲು ಬಹುಮುಖ್ಯ ಕಾರಣ- ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ. ಜರ್ಮನಿಯ ಸಾರಾ ವೋಸ್, ಪೌಲಿನ್ ಸ್ನಾಫೆರ್, ಎ ಲಿಝಬೆತ್ ಸೆಟ್ಸ್ ಮತ್ತು ಕಿಮ್ ಬುಯಿ ಎಂಬ ನಾಲ್ವರು ಪ್ಯಾರಾ ಜಿಮ್ನಾಸ್ಟಿಕ್ ಆಟಗಾರ್ತಿಯರು ಮಾಡಿದ ಘೋಷಣೆ. ನಾವೇನು ಧರಿಸಬೇಕು ಎಂಬುದನ್ನು ನಾವು ನಿರ್ಧರಿಸಬೇಕೇ ಹೊರತು ಇನ್ನಾರೂ ಅಲ್ಲ ಎಂದು ಹೇಳಿದ ಇವರು, ತುಂಡು ಬಟ್ಟೆಯ ಜಿಮ್ನಾಸ್ಟಿಕ್ ನಿಯಮವನ್ನು ಮುರಿದರು ಮತ್ತು ಸಂಪೂರ್ಣ ದೇಹ ಮುಚ್ಚುವ ಬಾಡಿ ಸೂಟ್ ಧರಿಸಿದರು. ಕ್ರೀಡೆಯನ್ನು ಸೆಕ್ಸಿಸಂ ಮಾಡುವುದಕ್ಕೆ ತಮ್ಮ ವಿರೋಧ ಇದೆ ಎಂದೂ ಹೇಳಿದರು. ಇದು ಒಲಿಂಪಿಕ್ಸ್ನಲ್ಲಿ ಸಂಚಲನ ಸೃಷ್ಟಿಸಿತು. ಮಹಿಳಾ ಕ್ರೀಡೆಯನ್ನು ಕ್ರೀಡೆಯಾಗಿ ನೋಡುವುದಕ್ಕಿಂತ ಸೆಕ್ಸಿಸಂ ದಂಧೆಯಾಗಿ ಆಯೋಜಕರು ನೋಡುತ್ತಿz್ದÁರೆ ಎಂಬ ಧ್ವನಿಗೆ ಗಟ್ಟಿ ಬಲವೂ ಬಂತು. ಹೆಣ್ಣು-ಗಂಡು ಸಮಾನವೆಂದ ಮೇಲೆ ಗಂಡಿಗಿಲ್ಲದ ಬಟ್ಟೆ ನಿಯಮ ಹೆಣ್ಣಿಗ್ಯಾಕೆ ಎಂಬ ಆಕ್ಷೇಪಗಳು ಅನೇಕರಿಂದ ಕೇಳಿ ಬಂದುವು. ವಿಶೇಷವಾಗಿ,
ಜಿಮ್ನಾಸ್ಟಿಕ್, ಬೀಚ್ ವಾಲಿಬಾಲ್ ಮತ್ತು ಬೀಚ್ ಹ್ಯಾಂಡ್ ಬಾಲ್ ಆಟದಲ್ಲಿ ಆಟಗಾರ್ತಿಯರಿಗೆ ಇರುವ ಕಠಿಣ ಧಿರಿಸು ನಿಯಮಗಳು ಆಟಗಾರರಿಗೆ ಸಂಬAಧಿಸಿದAತೆ ಇಲ್ಲವೇ ಇಲ್ಲ. ಅವರು ತಮಗನುಕೂಲವಾದ ಮೈಗಂಟಿಕೊಳ್ಳದ ಶಾಟ್ಸ್ಗಳನ್ನು ಧರಿಸಿ ಆಡುವುದಕ್ಕೆ ಅ ನುಮತಿ ಇದೆ. ಮತ್ತ್ಯಾಕೆ ಹೆಣ್ಣು ಮಾತ್ರ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಪ್ರಶ್ನೆ ಚರ್ಚೆಗೆ ಒಳಗಾಯಿತಲ್ಲದೇ ಇದು ಹೆಣ್ಣು ಶೋಷಣೆಯ ಇನ್ನೊಂದು ರೂಪ ಎಂಬAತಹ ವ್ಯಾಖ್ಯಾನಕ್ಕೂ ಒಳಗಾಯಿತು. ಈ ಎಲ್ಲವುಗಳ ಒಟ್ಟು ಮೊತ್ತವೇ ಜರ್ಮನಿಯ ಜಿಮ್ನಾಸ್ಟಿಕ್ ತಂಡದ ಹೊಸ ಧಿರಿಸು. ಆದರೆ, ಈ ಬೆಳವಣಿಗೆಗೆ ಸಂಬAಧಿಸಿ ಒಲಿಂಪಿಕ್ಸ್ ಅಧಿಕಾರಿಗಳು ಈ ಬಾರಿ ಜಾಗರೂಕತೆಯಿಂದ ಪ್ರತಿಕ್ರಿಯಿಸಿದರು. ನಮ್ಮದು ಸೆಕ್ಸ್ ಕೇಂದ್ರಿತ ಕ್ರೀಡೆಯಲ್ಲ ಮತ್ತು ಮಹಿಳಾ ಅಥ್ಲೀಟ್‌ಗಳ ದೇಹವನ್ನು ಹತ್ತಿರದಿಂದ ತೋರಿಸುವ ದೇಹಕೇಂ ದ್ರಿತ ಚಿತ್ರೀಕರಣವನ್ನೂ ನಿಲ್ಲಿಸುತ್ತೇವೆ ಎಂದೂ ಹೇಳಿದರು. ಅಷ್ಟಕ್ಕೂ,
ಯಾವುದು ಮಹಿಳಾ ಶೋಷಣೆ, ಯಾವುದು ಪ್ರಗತಿಪರ ಚಿಂತನೆ ಎಂದು ಜಗತ್ತಿಗೆ ಆಗಾಗ ಬೋಧನೆ ಮಾಡುತ್ತಿರುವುದು ಇವೇ ರಾಷ್ಟçಗಳು. ಮಹಿಳಾ ಶೋಷಣೆ ಮತ್ತು ಅಸಮಾನತೆಯ ಕಾರಣ ಕೊಟ್ಟು ಬುರ್ಖಾವನ್ನು ವಿರೋಧಿಸುವುದಕ್ಕೆ ಮತ್ತು ನಕಾಬನ್ನು ನಿಷೇ ಧಿಸುವುದಕ್ಕೂ ಮುಂದಾಗಿರುವುದು ಇವೇ ರಾಷ್ಟçಗಳು. ದುರಂತ ಏನೆಂದರೆ,
ಈ ಬೋಧಕರ ಒಳಮನಸ್ಸು ಹೊರಗೆ ಕಾಣುವಷ್ಟು ಬಿಳಿಯಲ್ಲ ಮತ್ತು ಹೆಣ್ಣನ್ನು ಮಾರಾಟದ ಸರಕಾಗಿ ಅವರು ಕಾಣುತ್ತಾರೆಯೇ ಹೊರತು ಇನ್ನೇನೂ ಅಲ್ಲ. ನಿಜವಾಗಿ, ಯಾವ ಕ್ರೀಡೆಗೆ ಯಾವ ರೂಪದ ಬಟ್ಟೆ ಧರಿಸಬೇಕು ಎಂಬುದನ್ನು ನಿಯಮವಾಗಿ ಹೇರುವುದೇ ಒಂದು ದೊಡ್ಡ ಶೋಷಣೆ. ದಿರಿಸು ಅವರವರ ಆಯ್ಕೆ ಎಂದ ಮೇಲೆ, ಹೆಣ್ಣಿನ ದಿರಿಸಿನ ಅಳತೆ ಇಷ್ಟೇ ಇರಬೇಕು ಎಂದು ಆe್ಞÁಪಿಸುವುದು ಯಾವ ರೀತಿಯ ಪ್ರಗತಿಪರತೆ? ದಿರಿಸಿಗೂ ಕ್ರೀಡೆಗೂ ಏನು ಸಂಬAಧ? ಕ್ಯಾತಿ ಫ್ರೀಡ್‌ಮನ್ ಎಂಬ ಓಟಗಾತಿ ಮೈಮುಚ್ಚುವ ಪೂರ್ಣ ದಿರಿಸು ಧರಿಸಿಯೇ 2000ದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕ್ರೀಡಾ ಆಯೋಜಕರ ನೆಚ್ಚಿನ ದಿರಿಸು ನಿಯಮವನ್ನು ಚಾಚೂ ತಪ್ಪದೇ ಪಾಲಿಸಿದ
ಓಟಗಾರ್ತಿಯರು ಅವರ ಹಿಂದೆ ಇದ್ದರು. ಪೂರ್ಣ ದಿರಿಸು ಧರಿಸಿ ಕ್ಯಾತಿಗೆ ಸಾಧನೆ ಮಾಡಲು ಸಾಧ್ಯವಾಗಿದ್ದರೆ ಮತ್ತು ಜರ್ಮನಿಯ ಜಿಮ್ನಾಸ್ಟಿಕ್ ಆಟಗಾರ್ತಿಯರು ಪೂರ್ಣ ಧಿರಿಸು ಧರಿಸಿ ತಮ್ಮ ಪ್ರತಿಭೆ ತೋರಬಲ್ಲ ರೆಂದಾದರೆ, ಈ ಬಿಕಿನಿಯನ್ನು ನಿಯಮವಾಗಿ ಜಾರಿಗೆ ತಂದವರ ಉz್ದÉÃಶವೇನು? ಯಾಕೆ ಆಟಗಾರರಿಗೆ ಈ ನಿಯಮದ ಬಿಗಿತನವಿಲ್ಲ? ಮಹಿಳಾ ಕ್ರೀಡೆಯನ್ನು ಯಾಕೆ ಒಂದು ಕ್ರೀಡೆ ಯಾಗಿ ಆಸ್ವಾದಿಸಲು ಇವರಿಗೆ ಸಾಧ್ಯವಾಗುವುದಿಲ್ಲ? ಮಹಿಳಾ ಕ್ರೀಡೆಗೆ ಕನಿಷ್ಠ ಬಟ್ಟೆಯನ್ನು ನಿಯಮ ವಾಗಿ ರೂಪಿಸಿ, ಆ ಮೂಲಕ ಕ್ರೀಡೆಯ ಬದಲು ಕ್ರೀಡಾಳುವಿನ ದೇಹವನ್ನು ಮಾರಾಟ ಮಾಡುವುದು ಯಾಕೆ ಶೋಷಣೆ ಎಂದು ಅನಿಸು ತ್ತಿಲ್ಲ? ಬುರ್ಖಾ ಧರಿಸುವುದನ್ನು ಶೋಷಣೆ ಎನ್ನುವವರೇ ಬಿಕಿನಿಯನ್ನು ನಿಯಮವಾಗಿ ಹೇರುವುದು ಏಕೆ? ಮತ್ತು ಇದರಲ್ಲಿ ಒಂದು ಶೋಷಣೆಯೂ ಇನ್ನೊಂದು ಪ್ರಗತಿಪರವೂ ಆಗುವುದು ಹೇಗೆ? ಬುರ್ಖಾದ ವಿರುದ್ಧ ಮಾತೆತ್ತಿದವರೆಲ್ಲ ಮತ್ತು ಖಂಡನೆ-ಮAಡನೆ ಮಾಡಿ ವ್ಯಾಖ್ಯಾನಿಸಿದವರೆಲ್ಲ ಮಹಿಳಾ ಕ್ರೀಡೆಯಲ್ಲಿ ರುವ ಈ ನಿಯಮಗಳ ಬಗ್ಗೆ ಯಾಕೆ ಜಾಣ ಕುರುಡು ಪ್ರದರ್ಶಿಸುತ್ತಿz್ದÁರೆ? ಅಂದಹಾಗೆ,
ಆಯ್ಕೆ ಸ್ವಾತಂತ್ರö್ಯವನ್ನು ಎತ್ತಿ ಹಿಡಿದ ನಾರ್ವೆ ಆಟಗಾರ್ತಿಯರು ಮತ್ತು ಜರ್ಮನಿಯ ಜಿಮ್ನಾಸ್ಟಿಕ್ ತಾರೆಯರಿಗೆ ಅಭಿನಂದನೆಗಳು.
No comments:
Post a Comment