ಜಾತ್ಯತೀತತೆ (Secularism) ಮತ್ತು ಲಿಂಗ ಸಮಾನತೆ (Gender Equality) ಎಂಬೆರಡು ಪದಗಳು ದೇಶ, ಕಾಲ, ಸಂಸ್ಕ್ರಿತಿಗಳಿಗೆ ಹೊಂದಿಕೊಂಡು ಭಿನ್ನಭಿನ್ನ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಿವೆ. ಜಾತ್ಯತೀತತೆಗೆ ಯುರೋಪಿಯನ್ ರಾಷ್ಟ್ರಗಳು ಕೊಟ್ಟಿರುವ ಅರ್ಥವನ್ನು ಭಾರತೀಯ ಉಪಭೂಖಂಡದ ರಾಷ್ಟ್ರಗಳು ಒಪ್ಪಿಕೊಂಡಿಲ್ಲ. ಅವು ಈ ಪದವನ್ನು ತನ್ನದೇ ಆದ ಪರಿಭಾಷೆಯಲ್ಲಿ ಓದುತ್ತಿವೆ. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯೂ ಇದಕ್ಕಿಂತ ಭಿನ್ನವಲ್ಲ. ಅದು ಕೂಡ ಪ್ರಶ್ನೆ, ಟೀಕೆ, ವ್ಯಂಗ್ಯಕ್ಕೆ ಈಡಾಗಿದೆ. ಹೆಣ್ಣು-ಗಂಡು ಸಮಾನರೆಂದಾದರೆ ರಿಲೇ, ಟೆನ್ನಿಸ್, ಬಾಕ್ಸಿಂಗ್, ಕ್ರಿಕೆಟ್ ಮುಂತಾದ ಕ್ಷೇತ್ರಗಳೇಕೆ ಇವರನ್ನು ಅಸಮಾನವಾಗಿ ನೋಡುತ್ತಿವೆ ಎಂದು ಪ್ರಶ್ನಿಸುವವರಿದ್ದಾರೆ. ಟೆನ್ನಿಸ್‍ನಲ್ಲಿ ಪುರುಷನು 5 ಸೆಟ್‍ಗಳಲ್ಲಿ 5 ಗಂಟೆಗಳಷ್ಟು ದೀರ್ಘ ಕಾಲ ಆಡಬಲ್ಲ. ಆದರೆ ಮಹಿಳಾ ಟೆನ್ನಿಸ್‍ಗಿರುವುದೇ 3 ಸೆಟ್. ಹೆಚ್ಚೆಂದರೆ ಒಂದೂವರೆ ಎರಡು ಗಂಟೆಗಳ ಒಳಗೆ ಸೋಲು-ಗೆಲುವು ನಿರ್ಣಯವಾಗುತ್ತದೆ. 100 ವಿೂಟರ್ ಓಟದಲ್ಲಿ ಉಸೇನ್ ಬೋಲ್ಟ್ ನ ಸಾಧನೆಯನ್ನು ಯಾವ ಮಹಿಳಾ ಓಟಗಾರ್ತಿಗೂ ಸರಿಗಟ್ಟಲು ಸಾಧ್ಯವಾಗಿಲ್ಲ. ಬೋಲ್ಟ್ ಆ ದೂರವನ್ನು 9.57 ಸೆಕೆಂಡ್‍ಗಳಲ್ಲಿ ಓಡಿ ಮುಗಿಸಿದರೆ ಮಹಿಳಾ ಓಟಗಾರ್ತಿಯು 10 ಸೆಕೆಂಡ್‍ಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕ್ರಮಿಸಿರುವುದೇ ಈ ವರೆಗಿನ ದಾಖಲೆ. ಕ್ರಿಕೆಟ್ ಆಗಲಿ, ಟೆನಿಸ್, ಫುಟ್ಬಾಲ್, ರೇಸ್ ಸಹಿತ ಹತ್ತಾರು ಕ್ರೀಡಾ ಪ್ರಕಾರಗಳಲ್ಲಿ ಪುರುಷ ಕ್ರೀಡೆಯೇ ಹೆಚ್ಚು ಆಕರ್ಷಕ ಮತ್ತು ಜನಪ್ರಿಯ. ಲಿಂಗ ಸಮಾನತೆಯ ಬಗ್ಗೆ ಧಾರಾಳ ಮಾತಾಡುವ ಸಿನಿಮಾ ಕ್ಷೇತ್ರವಂತೂ ಅಸಮಾನತೆಯನ್ನೇ ಪ್ರತಿದಿನವೂ ಪೋಷಿಸುತ್ತಾ ಬರುತ್ತಿದೆ. ಶಾರುಖ್, ಅವಿೂರ್, ಬಚ್ಚನ್‍ಗಳು ಇಳಿಪ್ರಾಯದಲ್ಲೂ ಹೀರೋಗಳಾಗಿಯೇ ಮೆರೆಯುತ್ತಿದ್ದಾರೆ. ಡಾ| ರಾಜ್‍ಕುಮಾರ್,ವಿಷ್ಣುವರ್ಧನ್ ರು ಕೊನೆವರೆಗೂ ಹೀರೋಗಳಾಗಿಯೇ ಪಾತ್ರ ನಿರ್ವಹಿಸಿದರು. ಆದರೆ ಇವರೆಲ್ಲರ ಯೌವನ ಕಾಲದಲ್ಲಿ ಇವರ ಜೊತೆ ಹೀರೋಯಿನ್‍ಗಳಾದವರು ಕೆಲ ವರ್ಷಗಳಲ್ಲೇ ಆ ಪಾತ್ರದಿಂದ ಕೆಳಗಿಳಿಯಬೇಕಾಯಿತು. ಆ ಬಳಿಕ ಇವರು ಈ ಹೀರೋಗಳ ಅತ್ತೆ, ತಾಯಿ, ಚಿಕ್ಕಮ್ಮ ಮುಂತಾದ ಪಾತ್ರಕ್ಕೆ ಸೀಮಿತಗೊಳ್ಳಬೇಕಾಯಿತು. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯು ಸಂಘರ್ಷಕ್ಕೆ ಒಳಗಾಗುವುದು ಇಲ್ಲಿ ಮತ್ತು ಇಂತಹ ಅನೇಕಾರು ವಿಷಯಗಳಲ್ಲಿ. ನಿಜವಾಗಿ, ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕವಾಗಿಯೇ ಕೆಲವು ವೈಶಿಷ್ಟ್ಯಗಳಿವೆ. ದುರಂತ ಏನೆಂದರೆ, ಆಧುನಿಕ ಜಗತ್ತಿನ ಲಿಂಗ ಸಮಾನತೆಯ ಕೂಗಿನಲ್ಲಿ ಈ ವೈಶಿಷ್ಟ್ಯತೆಯನ್ನೇ ನಿರ್ಲಕ್ಷಿಸುವ ಮತ್ತು ತಿರಸ್ಕರಿಸುವ ಆವೇಶ ಕಾಣಿಸುತ್ತದೆ. ಪುರುಷರನ್ನು ದ್ವೇಷಿಸುವುದೇ ಫೆಮಿನಿಸಂ ಆಗಿರಬೇಕು ಎಂದು ಅಂದುಕೊಳ್ಳುವಷ್ಟರ ಮಟ್ಟಿಗೆ ಲಿಂಗ ಸಮಾನತೆಯ ಹೋರಾಟವು ವೈರುಧ್ಯಗಳಿಂದ ಕೂಡಿವೆ. ಅಂದಹಾಗೆ, ಇಸ್ಲಾಮ್ ಲಿಂಗ ಸಮಾನತೆಯ ಕುರಿತಂತೆ ಈ ವೈರುಧ್ಯಗಳಾಚೆಗೆ ಸುಧಾರಿತ ವಿಧಾನವನ್ನು ಪ್ರಸ್ತುತಪಡಿಸುತ್ತದೆ. ಪ್ರಾಕೃತಿಕ ವೈಶಿಷ್ಟ್ಯವನ್ನು ಮಾನ್ಯ ಮಾಡುತ್ತಲೇ ಹೆಣ್ಣು-ಗಂಡಿನ ನಡುವೆ ಸಮಾನ ನ್ಯಾಯವನ್ನು ಅದು ಎತ್ತಿ ಹಿಡಿಯುತ್ತದೆ. ಆದ್ದರಿಂದಲೇ, ಹೆಣ್ಣಿಗೆ ಗಂಡಿಗಿಂತ ಹೆಚ್ಚು ಆಸ್ತಿ, ತಾಯಿಗೆ-ತಂದೆಗಿಂತ ಮೂರು ಪಟ್ಟು ಹೆಚ್ಚು ಸ್ಥಾನಮಾನ, ಹೆಣ್ಣಿಗೆ ವಿವಾಹ ಧನ ಇತ್ಯಾದಿ ವಿಶೇಷ ಪರಿಗಣನೆಯನ್ನು ನೀಡಿದೆ. ತಾಯಿ, ತಂಗಿ, ಪತ್ನಿ, ಸಹೋದರಿ, ಮಗಳು.. ಮುಂತಾದುವುಗಳನ್ನು ಇಸ್ಲಾಮ್ ಪ್ರಕೃತಿ ಸಹಜ ಪಾತ್ರಗಳಾಗಿ ಕಾಣುತ್ತದೆಯೇ ಹೊರತು ಅವುಗಳನ್ನು ಬಲಹೀನವಾಗಿಯೋ ಅಬಲೆಯಾಗಿಯೋ ಅಲ್ಲ ಅಥವಾ ಅವುಗಳು ಪತಿ, ತಂದೆ, ಅಣ್ಣ-ತಮ್ಮ ಮುಂತಾದ ಪಾತ್ರಗಳ ಗುಲಾಮವಾಗಿಯೂ ಅಲ್ಲ. ಅವರ ನಡುವಿನ ಸಮಾನತೆಯನ್ನು ಪವಿತ್ರ ಕುರ್‍ಆನ್ ವಿವಿಧ ಕಡೆ (3:195, 4:124, 16:97, 40:40) ಪ್ರಸ್ತಾಪಿಸುತ್ತದೆ. ನಿಜವಾಗಿ,
ಇವತ್ತು, ಲಿಂಗ ಸಮಾನತೆ (Gender Equality) ಎಂಬ ಪದಕ್ಕೆ ಹೆಚ್ಚು ಸಂತುಲಿತ ಮತ್ತು ಪ್ರಕೃತಿ ಸಹಜವಾದ ಪರ್ಯಾಯ ಪದವನ್ನು ಹುಡುಕಬೇಕಾಗಿದೆ. ಜೊತೆಗೆ, ಪ್ರಕೃತಿ ಸಹಜ ವೈಶಿಷ್ಟ್ಯವನ್ನು ಹೆಣ್ಣಿನ ‘ದ್ವಿತೀಯ ದರ್ಜೆ’ಗೆ ಪುರಾವೆಯಾಗಿ ಮಂಡಿಸುವುದನ್ನು ಖಂಡಿಸಬೇಕಾಗಿದೆ.
No comments:
Post a Comment