ಕಳೆದ ಒಂದೇ ವಾರದಲ್ಲಿ ನಡೆದ ಘಟನೆಗಳಿವು-
ರೀಲ್ಸ್ ನ ಹುಚ್ಚಿಗೆ ಬಿದ್ದು ಜೀವ ಕಳಕೊಳ್ಳುತ್ತಿರುವ ಯುವ ಸಮೂಹದ ಸುದ್ದಿಗಳು ಪ್ರತಿದಿನವೆಂಬಂತೆ ವರದಿಯಾಗುತ್ತಿವೆ. ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಹರೆಯದ ಯುವಕ-ಯುವತಿಯರು ನಡೆಸುತ್ತಿರುವ ಕಸರತ್ತುಗಳಿಂದ ಮನೆಗಳು ಸ್ಮಶಾನಗಳಾಗುತ್ತಿವೆ. ಕರಣ್ ಪರ್ಮಾರ್ ಎಂಬ 7ನೇ ತರಗತಿ ವಿದ್ಯಾರ್ಥಿಯನ್ನೇ ಹುಡುಗನನ್ನೇ ಈ ರೀಲ್ಸ್ ಹುಚ್ಚು ಬಿಟ್ಟಿಲ್ಲ ಎಂದ ಮೇಲೆ ಹರೆಯದ ಪೀಳಿಗೆಯಲ್ಲಿ ಈ ಭ್ರಮೆ ಎಷ್ಟಿರಬಹುದು?
ಮಧ್ಯಪ್ರದೇಶದ ಈ ಕರಣ್ ಪರ್ಮಾರ್ ರೀಲ್ಸ್ ಮಾಡಲು ಹೋಗಿ ಜೀವ ಕಳಕೊಂಡಿದ್ದಾನೆ. ಆತ್ಮಹತ್ಯೆಯ ರೀಲ್ಸ್ ಮಾಡುವುದಕ್ಕಾಗಿ ಈತ ಗೆಳೆಯರೊಂದಿಗೆ ಹೋಗಿದ್ದ. ಕುತ್ತಿಗೆಗೆ ಹಗ್ಗ ಬಿಗಿದು ಸಂಕಟ ಪಡುತ್ತಿರುವಂತೆ ನಟಿಸುವುದು ರೀಲ್ಸ್ ನ ಗುರಿ. ಆದರೆ, ಹಗ್ಗ ನಿಜಕ್ಕೂ ಆತನ ಕೊರಳನ್ನು ಬಿಗಿದಿದೆ. ಆತ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಶ್ರಮ ಪಡುತ್ತಿದ್ದರೂ ಉಳಿದ ಮಕ್ಕಳ ಅದನ್ನು ನಟನೆ ಎಂದುಕೊಂಡು ಆಟಕ್ಕೆ ಮರಳಿದ್ದಾರೆ. ಹೀಗೆ ಆ ಬಾಲಕ ಪ್ರಾಣ ಬಿಟ್ಟಿದ್ದಾನೆ. ಇದೊಂದೇ ಅಲ್ಲ
,
ಜೈಪುರದಲ್ಲಿ ಮದುವೆ ನಿಶ್ಚಿತವಾಗಿದ್ದ ವಧು-ವರರು ಮದುವೆಗೆ ಮುಂಚಿನ ಫೋಟೋ ಶೂಟಿಂಗ್ ವೇಳೆ ಗಂಭೀರ ಗಾಯಗೊಂಡಿದ್ದಾರೆ. 22 ವರ್ಷದ ರಾಹುಲ್ ಮತ್ತು 20 ವರ್ಷದ ಜಾಹ್ನವಿ ರೈಲ್ವೆ ಸೇತುವೆಯ ಮೇಲೆ ನಿಂತು ಶೂಟಿಂಗ್ ನಡೆಸುತ್ತಿದ್ದಾಗ ರೈಲು ಬಂದಿದೆ. ಭಯದಿಂದ ಇಬ್ಬರೂ 300 ಅಡಿ ಎತ್ತರದಿಂದ ಕೆಳಗೆ ಹಾರಿದ್ದಾರೆ. ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈಯ ಶ್ವೇತಾ ಎಂಬ 23 ವರ್ಷದ ಯುವತಿಯ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ರೀಲ್ಸ್ ಗಾಗಿ ಈಕೆ ಕಾರನ್ನು ಹಿಂದೆಗೆಯುವ ಪ್ರಯತ್ನದ ನಡುವೆ 300 ಅಡಿ ಪ್ರಪಾತಕ್ಕೆ ಬಿದ್ದು ಜೀವ ಕಳಕೊಂಡಿದ್ದಾಳೆ. ಹಿಂದುಗಡೆ ಇರುವ ಭಾರೀ ಪ್ರಪಾತದ ಹತ್ತಿರ ಕಾರು ತಂದು ನಿಲ್ಲಿಸುವುದು ಆಕೆಯ ಉದ್ದೇಶವಾಗಿತ್ತು. ಆದರೆ ಪ್ರಪಾತದ ಹತ್ತಿರ ಬಂದು ಬ್ರೇಕ್ ಹಾಕುವ ಬದಲು ಎಕ್ಸಿಲರೇಟರ್ ಒತ್ತಿದ್ದು ಈ ಸಾವಿಗೆ ಕಾರಣವಾಗಿತ್ತು. ಮುಂಬೈಯ 27 ವರ್ಷದ ಆನ್ವಿ ಕಮ್‌ದಾರ್ ಎಂಬ ಯುವತಿ ಜೀವ ಕಳಕೊಂಡದ್ದೂ ರೀಲ್ಸ್ ಕಾರಣವೇ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ಗಳಿರುವ ಈಕೆಯ ಣhegಟoಛಿಚಿಟರಿouಡಿಟಿಚಿಟ ಖಾತೆ ಬಹಳ ಜನಪ್ರಿಯ. ಜಲಪಾತದಂಥ ನೀರ ಹರಿವಿನ ಬಳಿ ನಿಂತು ರೀಲ್ಸ್ ಮಾಡುತ್ತಿರುವ ವೇಳೆ ಈಕೆ ಕಾಲುಜಾರಿ 400 ಅಡಿ ಪ್ರಪಾತಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.
ವಾರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೊಂದು ವೀಡಿಯೋವೊಂದು ಹರಿದಾಡುತ್ತಿತ್ತು. ಎತ್ತರದ ಕಟ್ಟಡದಲ್ಲಿ ಯುವತಿ ನೇತಾಡುತ್ತಿದ್ದರೆ ಯುವಕ ಆಕೆಯ ಕೈ ಹಿಡಿದಿದ್ದ. ಟೆರೇಸ್‌ನ ಮೇಲೆ ಕೊನೆಯಲ್ಲಿ ಮಲಗಿದ್ದ ಯುವಕ ಕೆಳಗೆ ಕೈ ಚಾಚಿ ಯುವತಿಯನ್ನು ಕೈ ಹಿಡಿದು ನೇತಾಡಿಸುವ ಈ ವೀಡಿಯೋವನ್ನು ರೀಲ್ಸ್ ಗಾಗಿ ಮಾಡಲಾಗಿತ್ತು. ಮಹಾರಾಷ್ಟ್ರದ ಮೀನಾಕ್ಷಿ ಸಾಲುಂಕೆ ಮತ್ತು ಮಿಹಿರ್ ಗಾಂಧಿ ಎಂಬಿಬ್ಬರನ್ನು ಪೊಲೀಸರು ಆ ಬಳಿಕ ಬಂಧಿಸಿದರು.. ಅಂದಹಾಗೆ,

ಸೋಶಿಯಲ್ ಮೀಡಿಯಾದ ಈ ಕಾಲದಲ್ಲಿ ಇಂಥ ಬಂಧನಗಳಾಗಲಿ ಅಥವಾ ಸಾವಿನ ಸುದ್ದಿಗಳಾಗಲಿ ಯುವ ಸಮೂಹದಲ್ಲಿ ಭಾರೀ ಪರಿವರ್ತನೆ ತರಬಲ್ಲುದು ಎಂದು ಹೇಳುವ ಹಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಒಮ್ಮೆ ಕಣ್ಣಾಡಿಸಿದರೆ ಇಂಥ ಸಾಹಸಮಯ ರೀಲ್ಸ್ ಗಳು ಕಣ್ಣು ಕುಕ್ಕುವಷ್ಟು ಸಿಗುತ್ತವೆ. ಅದೊಂದು ಹುಚ್ಚು. ಕ್ರೇಜು. ತನ್ನವರ ಎದುರು ಭಿನ್ನ ಐಡೆಂಟಿಟಿಯನ್ನು ಸ್ಥಾಪಿಸುವ ಉಮೇದು. ಮಾಲು, ಮಾರುಕಟ್ಟೆ, ಮದುವೆ, ಮುಂಜಿ, ಪಾರ್ಟಿಗಳಲ್ಲಿ ಗುರುತಿಗೀಡಾಗುವ ಹಂಬಲ. ಸಾರ್ವಜನಿಕವಾಗಿ ಹೆಚ್ಚೆಚ್ಚು ಗುರುತಿಗೀಡಾಗಲು ಪ್ರಾರಂಭವಾದಂತೆಯೇ ಹೊಸ ಹೊಸ ಸಾಹಸದ ರೀಲ್ಸ್ ಗಳನ್ನು ಮಾಡಲೇಬೇಕಾದ ಒತ್ತಡಕ್ಕೆ ಇಂಥವರು ಒಳಗಾಗತೊಡಗುತ್ತಾರೆ. ಒಮ್ಮೆ ಮಾಡಿದಂಥ ಸಾಹಸವನ್ನು ಇನ್ನೊಮ್ಮೆ ಮಾಡಿದರೆ ಅದಕ್ಕೆ ಮೆಚ್ಚುಗೆಯೂ ಸಿಗುವುದಿಲ್ಲ. ಅಪಾಯಕಾರಿ ಸಾಹಸಕ್ಕೆ ಆ ಪ್ರಾಯದವರಲ್ಲಿ ಹೆಚ್ಚು ಮೆಚ್ಚುಗೆ ಸಿಗುತ್ತವಾದ್ದರಿಂದ ಅಂಥದಕ್ಕೆ ಪ್ರಯತ್ನಿಸಲೇಬೇಕಾದ ಅಗತ್ಯವೂ ಇರುತ್ತದೆ. ಹಾಗಂತ,
ಇಂಥ ಸಾಹಸಪೂರ್ಣ ರೀಲ್ಸ್ ಗಾಗಿ ಇವರೆಲ್ಲ ತರಬೇತಿ ಪಡೆದಿರುತ್ತಾರೆ ಎಂದಲ್ಲ. ಹುಂಬ ಧೈರ್ಯವೇ ಇಂಥ ರೀಲ್ಸ್ ದಾರರ ಬಂಡವಾಳ. ಕೈಯಲ್ಲಿ ಮೊಬೈಲ್ ಇದೆ, ಹುಚ್ಚು ಪ್ರಾಯವಿದೆ ಮತ್ತು ಹುಂಬ ಧೈರ್ಯವೂ ಇದೆ.. ಈ ಮೂರು ಸೇರಿಕೊಂಡಾಗ ಅಪಾಯಕಾರಿಯಾದ ಸಾಹಸಗಳೂ ಮಾಮೂಲಿಯಾಗಿ ಕಾಣಿಸ ತೊಡಗುತ್ತದೆ. ಒಂದಕ್ಕಿಂತ ಭಿನ್ನವಾದ ಮತ್ತು ಒಂದನ್ನೊಂದು ಮೀರಿಸುವ ರೀಲ್ಸ್ ಪ್ರಯತ್ನಗಳೂ ನಡೆಯಲೇಬೇಕಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ವಿವಿಧ ರೀಲ್ಸ್ ಗಳನ್ನು ವೀಕ್ಷಿಸುತ್ತಾ ಮತ್ತು ಅದಕ್ಕಿಂತ ಹೆಚ್ಚು ಸಾಹಸಮಯ ಮತ್ತು ಭಿನ್ನ ರೀಲ್ಸ್ ಗಳನ್ನು ಮಾಡಲು ಪ್ರಯತ್ನಿಸುತ್ತಾ ಕೊನೆಗೆ ಹೀಗೆ ಜೀವಕಳಕೊಳ್ಳುವವರು ಧಾರಾಳ ಇದ್ದಾರೆ. 15 ರಿಂದ 30ರ ಪ್ರಾಯದ ಒಳಗಿನವರೇ ಹೆಚ್ಚಾಗಿ ಮಾಡುವ ಇಂಥ ಅಪಾಯಕಾರಿ ಸಾಹಸದ ರೀಲ್ಸ್ ಗಳು ಅವರಿಗೆ ಮಾತ್ರ ಸೀಮಿತಗೊಳ್ಳುವುದಲ್ಲ ಎಂಬುದೇ ಈ ಬಗ್ಗೆ ಗಂಭೀರವಾಗಿ ಆಲೋಚಿಸುವುದಕ್ಕೆ ಕಾರಣವಾಗಬೇಕಿದೆ. ಇಂಥ ರೀಲ್ಸ್ ಗಳು ಬೆಳೆಯುವ ಪೀಳಿಗೆಯನ್ನು ಪ್ರಭಾವಿತಗೊಳಿಸುತ್ತದೆ ಮತ್ತು ಆ ಪೀಳಿಗೆಯು ಇದಕ್ಕಿಂತಲೂ ಅಪಾಯಕಾರಿ ಸಾಹಸಕ್ಕೆ ಕೈ ಹಾಕಬಲ್ಲದು. ಇವುಗಳ ಪರಿಣಾಮವಾದರೋ ಅತ್ಯಂತ ಘೋರ. ಹರೆಯದ ಮಗ ಅಥವಾ ಮಗಳನ್ನು ಕಳಕೊಳ್ಳುವ ಹೆತ್ತವರು ಜೀವನಪೂರ್ತಿ ಸಂಕಟಪಡಬೇಕಾಗುತ್ತದೆ. ದೇಶಕ್ಕೆ ಅಮೂಲ್ಯ ಮಾನವ ಶಕ್ತಿ ನಷ್ಟವಾಗುತ್ತದೆ. ಹಾಗಂತ,
ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಯಿದೆ. ಸೋಶಿಯಲ್ ಮೀಡಿಯಾವಂತೂ ಸಮಾಜದ ಉಸಿರಾಟವೇ ಆಗಿ ಹೋಗಿದೆ. ಅದರಿಂದ ಹೊರಬರಲು ಸಾಧ್ಯವೇ ಇಲ್ಲದಷ್ಟು ಅದು ಬದುಕಿನ ಭಾಗವಾಗಿ ಹೋಗಿದೆ. ಆದ್ದರಿಂದ ಜಾಗೃತಿಯೊಂದೇ ಏಕೈಕ ಪರಿಹಾರವಾಗಿ ಕಾಣಿಸುತ್ತಿದೆ. ಇದೇ ಸೋಶಿಯಲ್ ಮೀಡಿಯವನ್ನು ಬಳಸಿಯೇ ಈ ಜಾಗೃತಿ ಮಾಡುವಂತಾಗಬೇಕು. ಅದೂ ಹದಿಹರೆಯದವರ ಮೆಚ್ಚಿನ ಇನ್‌ಸ್ಟಾಗ್ರಾಮ್ ಮೂಲಕವೇ ಈ ಪ್ರಯತ್ನ ನಡೆಯಬೇಕು. ಇನ್‌ಸ್ಟಾಗ್ರಾಮ್‌ನ ಸಾಮಾನ್ಯ ಬಳಕೆದಾರರು ಜಾಗೃತಿ ಮೂಡಿಸುವುದು ಒಂದಾದರೆ, ಸರ್ಕಾರವೇ ಈ ಬಗ್ಗೆ ನಿರ್ದಿಷ್ಟ ಯೋಜನೆ ಮತ್ತು ಗುರಿಯೊಂದಿಗೆ ಕಾರ್ಯಪ್ರವೃತ್ತವಾಗುವುದು ಇನ್ನೊಂದು. ಸರ್ಕಾರವು ಒಂದು ಆಂದೋಲನದಂತೆ ಇಂಥ ಜಾಗೃತಿ ಕಾರ್ಯಕ್ಕಿಳಿದರೆ ಹುಚ್ಚು ಪ್ರಾಯದಲ್ಲಿ ವಿವೇಕಕ್ಕೂ ಮೂಡಿಸಬಲ್ಲುದು. ಅಲ್ಲದೆ, ಪ್ರತಿ ಮನೆಯ ಹಿರಿಯರೂ ಈ ಕುರಿತಂತೆ ಎಚ್ಚರಿಕೆ ವಹಿಸಬೇಕು. ರೀಲ್ಸ್ ನ ಸುತ್ತ ಹೆಣೆದುಕೊಂಡಿರುವವರ ಅಪಾಯಗಳ ಬಗ್ಗೆ ತಮ್ಮ ಮನೆಯ ಮಕ್ಕಳಲ್ಲಿ ಆಗಾಗ ವಿಚಾರಿಸುತ್ತಿರಲೇಬೇಕು. ರೀಲ್ಸ್ ಮಾಡುವ ವೇಳೆ ಅಪಾಯಕ್ಕೆ ಸಿಲುಕಿದ ಸುದ್ದಿ, ಜೀವ ಕಳಕೊಂಡವರ ಸುದ್ದಿಗಳ ನ್ನು ಈ ಪ್ರಾಯದ ಮಕ್ಕಳಲ್ಲಿ ಮನೆಯವರು ಹಂಚುತ್ತಿರಬೇಕು. ಬಾಹ್ಯ ನೋಟಕ್ಕೆ ನಮ್ಮ ಮಕ್ಕಳು ಅಂಥವರಲ್ಲ ಎಂದೇ ಅನಿಸಬಹುದು. ಇವರು ಬರೇ ರೀಲ್ಸ್ ಮಾತ್ರ ನೋಡ್ತಾರೆ, ರೀಲ್ಸ್ ಮಾಡಲ್ಲ, ಮಾಡಿದ್ರೂ ಅಪಾಯಕಾರಿ ಸನ್ನಿವೇಶಗಳಲ್ಲಿ ಚಿತ್ರೀಕರಿಸಲ್ಲ.. ಎಂಬೆಲ್ಲಾ ಅಭಿಪ್ರಾಯ ಹೆತ್ತವರಿಗಿರಬಹುದು. ಆದರೆ, ನಿರ್ಲಕ್ಷ್ಯ ಸಲ್ಲದು. ಮಕ್ಕಳಲ್ಲಿ ಆಗಾಗ ಜಾಗೃತಿ ಮೂಡಿಸುವ ಮಾತುಗಳನ್ನು ಹೇಳುತ್ತಿರಬೇಕು. ಮುಖ್ಯವಾಗಿ ಮನೆಯಿಂದ ಹೊರಗೆ ಗೆಳೆಯರೊಂದಿಗೆ ಸುತ್ತಾಟಕ್ಕೆ ಹೋಗುವಾಗ ಈ ವಿಷಯದಲ್ಲಿ ಬಹಳ ಎಚ್ಚರಿಕೆ ಇರಬೇಕು.
ಇನ್‌ಸ್ಟಾಗ್ರಾಮ್ ಎಂಬುದು ಫೇಸ್‌ಬುಕ್ ಅಥವಾ ಎಕ್ಸ್ ನಂಥಲ್ಲ. ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ ಗಂಭೀರ ಚರ್ಚೆ, ರಾಜಕೀಯ, ಕೋಮುವಾದ, ವಿಚಾರ ಮಂಥನಗಳು ನಡೆಯುವಾಗ ಈ ಇನ್‌ಸ್ಟಾಗ್ರಾಮ್ ಮನರಂಜನೆಯನ್ನೇ ಮುಖ್ಯವಾಗಿಸಿ ಕೊಂಡಿರುತ್ತದೆ. ಮುಖ್ಯವಾಗಿ ರೀಲ್ಸ್ ನ ದುನಿಯಾಕ್ಕೆ ಬಹಳ ದೊಡ್ಡ ಮಾರುಕಟ್ಟೆಯಿದೆ. ಹ ದಿಹರೆಯದವರಿಂದ ಹಿಡಿದು ಹಿರಿಯವರ ವರೆಗೆ ಅದರ ವ್ಯಾಪ್ತಿ ಬಹಳ ದೊಡ್ಡದು. ಭಾಷೆಯ ಹಂಗಿಲ್ಲದೇ ರೀಲ್ಸ್ ಗಳು ಜಗತ್ತನ್ನಿಡೀ ಸುತ್ತುತ್ತಲೂ ಇರುತ್ತವೆ. ಹದಿಹರೆಯಕ್ಕೆ ಏನೆಲ್ಲಾ ಬೇಕೋ ಅವೆಲ್ಲವನ್ನೂ ಒದಗಿಸುವ ಸಾಮರ್ಥ್ಯ ಈ ರೀಲ್ಸ್ ಜಗತ್ತಿನಲ್ಲಿದೆ. ಇಡೀ ದಿನ ಸ್ಕ್ರಾಲ್ ಮಾಡಿದರೂ ಮುಗಿಯದಷ್ಟು ಮತ್ತು ಹೊಸ ಹೊಸ ರೀಲ್ಸ್ ಗಳನ್ನು ಒದಗಿಸುವಷ್ಟು ಯಥೇಚ್ಛ ರೀಲ್ಸ್ ಬಂಡವಾಳವೂ ಈ ಜಗತ್ತಿನಲ್ಲಿದೆ. ಆದ್ದರಿಂದಲೇ ರೀಲ್ಸ್ ಗಾಗಿ ಹದಿಹರೆಯದ ಜೀವಹಾನಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಎಲ್ಲೋ ದೂರದ ಸಂಗತಿ ಎಂದು ಮೈ ಮರೆತರೆ ನಾಳೆ ಹತ್ತಿರದಿಂದಲೇ ಇಂಥ ಸುದ್ದಿಗಳನ್ನು ಅಲಿಸಬೇಕಾದಂಥ ಸ್ಥಿತಿಯೂ ಎದುರಾದೀತು.
No comments:
Post a Comment