ಪ್ರತಿಯೊಂದಕ್ಕೂ ಸಕಾರಾತ್ಮಕ (Positive) ಮತ್ತು ನಕಾರಾತ್ಮಕ(negetive)ವಾದ ಎರಡು ಮುಖಗಳಿರುತ್ತವೆ. ಗೋವನ್ನೇ ಎತ್ತಿಕೊಳ್ಳಿ. ಅದು ಎಲ್ಲೆಂದರಲ್ಲಿ ಸೆಗಣಿ ಹಾಕುತ್ತದೆ, ಮೂತ್ರ ಮಾಡುತ್ತದೆ, ಹಾಯುತ್ತದೆ, ಸರಿ-ತಪ್ಪುಗಳ ಪರಿವೆಯಿಲ್ಲದೇ ಮೇಯುತ್ತದೆ.. ಇತ್ಯಾದಿ ಇತ್ಯಾದಿ ನಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡಬಹುದು. ಹಾಗಂತ, ಸಕಾರಾತ್ಮಕ ಅಂಶಗಳೂ ಗೋವಿನಲ್ಲಿದೆ. ಅದು ಹಾಲು ಕೊಡುತ್ತದೆ, ಆಹಾರವಾಗುತ್ತದೆ, ಹೇಳಿದ್ದನ್ನು ಅನುಸರಿಸುತ್ತದೆ.. ಇತ್ಯಾದಿ. ರಮಝಾನ್‍ಗೂ ಈ ಎರಡು ಮುಖಗಳಿವೆ. ಅದು ಹಸಿವೆ ಮತ್ತು ಬಾಯಾರಿಕೆಯನ್ನು ಕೊಡುತ್ತದೆ. ನಿತ್ರಾಣ ಉಂಟು ಮಾಡುತ್ತದೆ. ದೈಹಿಕ ಸಾಮರ್ಥ್ಯವನ್ನು ಕುಂದಿಸುತ್ತದೆ.. ಇತ್ಯಾದಿ. ಅದರ ಜೊತೆಗೇ ರಮಝಾನ್ ಇನ್ನೊಬ್ಬರ ಹಸಿವೆ, ಬಾಯಾರಿಕೆಯನ್ನು ನಮ್ಮ ಅನುಭವಕ್ಕೆ ತರುತ್ತದೆ, ದುರ್ಬಲರ ಬದುಕನ್ನು ಆಲೋಚನೆಗೆ ಹಚ್ಚುತ್ತದೆ ಎಂದೂ ಹೇಳಬಹುದು. ಇಷ್ಟೇ ಅಲ್ಲ, ರಮಝಾನ್‍ಗೆ ಮೂರನೆಯದಾದ ಇನ್ನೊಂದು ಮುಖವೂ ಇದೆ. ಅದುವೇ ಅಧ್ಯಾತ್ಮದ್ದು. ಅದು ಹಸಿವನ್ನು ಆಧ್ಯಾತ್ಮಿಕತೆಯೊಂದಿಗೆ ಜೋಡಿಸುತ್ತದೆ. ‘ಬಾಯಾರಿಕೆ, ಪ್ರಾರ್ಥನೆ, ಆಯಾಸ ಸಹಿತ ಬದುಕಿನ ಸರ್ವ ಚಟುವಟಿಕೆಗಳಿಗೂ ಅದು ಆಧ್ಯಾತ್ಮಿಕ ಸಂಬಂಧವನ್ನು ಕಟ್ಟಿಕೊಡುತ್ತದೆ. ಇನ್ನೊಬ್ಬನ ಹಸಿವು, ದಾಹವನ್ನು ಸ್ವಯಂ ಅನುಭವಿಸಿಕೊಂಡು ಅವರಿಗಾಗಿ ಮಿಡಿಯುವ ಗುಣವನ್ನು ಮೈಗೂಡಿಸಿಕೊಳ್ಳುವುದು ದೇವನಿಗೆ ಇಷ್ಟ..’ ಎಂಬ ಸೊಗಸಾದ ಮತ್ತು ಮಾನವೀಯವಾದ ಜೀವನ ಪಾಠವನ್ನು ರಮಝಾನ್ ಪ್ರಸ್ತುತಪಡಿಸುತ್ತದೆ. ಆದ್ದರಿಂದಲೇ, ನಮ್ಮ ಸಾಮಾನ್ಯ ನಕಾರಾತ್ಮಕ ಮತ್ತು ಸಕಾರಾತ್ಮಕ ಚರ್ಚೆಗಳಿಗಿಂತ ರಮಝಾನ್ ಭಿನ್ನವಾಗಿ ನಿಲ್ಲುವುದು.
ಆಧುನಿಕ ತಂತ್ರಜ್ಞಾನಗಳು ಇವತ್ತು ಎಷ್ಟು ಪ್ರಭಾವಶಾಲಿಯಾಗಿ ನಮ್ಮನ್ನು ಆವರಿಸಿಬಿಟ್ಟಿವೆಯೆಂದರೆ, ಅದು ನಮ್ಮ ಎಲ್ಲವನ್ನೂ ನಿಯಂತ್ರಿಸಿ ಬಿಡುವಷ್ಟು. ಹುಡುಕಾಡುವುದಕ್ಕೆ (Search) ಗೂಗಲ್ ಇದೆ. ಸಂದೇಶ ಕಳಿಸುವುದಕ್ಕೆ ವಾಟ್ಸಪ್ ಇದೆ. ಗೆಳೆತನ ಬೆಳೆಸುವುದಕ್ಕೆ ಫೇಸ್‍ಬುಕ್ ಇದೆ. ಜಗತ್ತನ್ನು ಅರಿಯುವುದಕ್ಕೆ ವೆಬ್ ಪೋರ್ಟಲ್‍ಗಳಿವೆ. ಹೇಗೆ ನಗಬೇಕು, ನಡೆಯಬೇಕು, ಮಾತಾಡಬೇಕು, ಯಾವ ಭಂಗಿಯಲ್ಲಿ ಹಾಯ್ ಹೇಳಬೇಕು, ಮಾತಾಡುವಾಗ ದೇಹ ಚಲನೆ ಹೇಗಿರಬೇಕು, ದೃಷ್ಟಿ ಯಾವ ಕಡೆಗಿರಬೇಕು, ಹೇಗೆ ಡ್ರೆಸ್ ಧರಿಸಬೇಕು,ಕಾಲೇಜ್ ಗೆ, ಕಚೇರಿಗೆ, ಮದುವೆಗೆ, ಔತಣಕ್ಕೆ, ಪ್ರಾರ್ಥನೆಗೆ ... ಹೋಗುವಾಗ ಯಾವ ಬಣ್ಣದ ಉಡುಪು ಉತ್ತಮ.. ಎಲ್ಲವನ್ನೂ ‘ಗೂಗಲ್’ ಹೇಳಿಕೊಡುತ್ತದೆ. ಒಂದು ರೀತಿಯಲ್ಲಿ, ತಂತ್ರಜ್ಞಾನಗಳು ಮನುಷ್ಯನ ಹುಡುಕಾಟವನ್ನು ಸುಲಭಗೊಳಿಸಿವೆ. ಆಯ್ಕೆಗಳ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಆದರೂ ಕೆಲವು ತಕರಾರುಗಳಿವೆ. ಅವು ಮೌಲ್ಯಗಳನ್ನು ಸವಕಲಾಗಿಸಿಬಿಟ್ಟಿವೆ. ಒಬಾಮರ ಬಗ್ಗೆಯೋ, ಸ್ಟೀಪನ್ ಹಾಕಿಂಗ್ ಅಥವಾ ಮಾರ್ಕ್ ಜುಕರ್‍ಬರ್ಗ್‍ರ ಬಗ್ಗೆಯೋ ಧಾರಾಳ ಮಾತಾಡುವ ಇವತ್ತಿನ ‘ತಂತ್ರಜ್ಞಾನದ ಮಗು’, ಚಿಕ್ಕಪ್ಪ, ದೊಡ್ಡಪ್ಪರ ಬಗ್ಗೆ ನಾಲ್ಕು ಮಾತುಗಳನ್ನು ಹೇಳಲಾರದಷ್ಟು ಮಾಹಿತಿ ರಹಿತವಾಗುತ್ತಿದೆ. ಮಾವ, ಅತ್ತೆ, ಸೋದರತ್ತೆ ಎಂಬ ವ್ಯಕ್ತಿತ್ವಗಳ ಮಹತ್ವ, ಕೌಟುಂಬಿಕ ಪರಂಪರೆಗಳು, ಅವುಗಳೊಳಗಿನ ಆರ್ದ್ರತೆ, ಭಾವನಾತ್ಮಕತೆ ಎಲ್ಲದರಿಂದಲೂ ‘ತಂತ್ರಜ್ಞಾನದ ಮಗು' ಮಾಹಿತಿರಹಿತವಾಗಿ ಬದುಕುತ್ತಿದೆ. ಚಿಕ್ಕಮ್ಮನೋ, ದೊಡ್ಡಮ್ಮನೋ, ಅತ್ತೆಯೋ, ಮಾವನೋ.. ಎಲ್ಲರೂ ‘ತಂತ್ರಜ್ಞಾನದ ಮಗುವಿಗೆ’ ಬಹುತೇಕ ಒಂದೇ, ಆಂಟಿ-ಅಂಕಲ್‍ಗಳು. ಒಂದು ಕಡೆ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಇನ್ನೊಂದು ಕಡೆ ಮಂಜುಗಡ್ಡೆಯಂತೆ ಕರಗುತ್ತಿರುವ ಸಂಬಂಧಗಳು.. ಇವುಗಳ ನಡುವೆ ಆಧುನಿಕ ಜಗತ್ತು ಸಿಕ್ಕಿ ಒದ್ದಾಡುತ್ತಿರುವಂತಿದೆ. ತಂತ್ರಜ್ಞಾನವನ್ನು ಅನಿವಾರ್ಯವೆಂದು ಒಪ್ಪಿಕೊಂಡಿರುವ ನಾವು ಅದೇ ವೇಳೆ ಕರಗುತ್ತಿರುವ ಜೀವನ ಮೌಲ್ಯ ಮತ್ತು ಸಂಬಂಧಗಳಿಗಾಗಿ ಕರುಬುತ್ತಲೂ ಇದ್ದೇವೆ. ನಿಜವಾಗಿ, ಇಂಥ ಇಕ್ಕಟ್ಟಿಗೆ ರಮಝಾನ್ ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಅದು ತಂತ್ರಜ್ಞಾನವನ್ನು ಒಪ್ಪಿಕೊಳ್ಳುತ್ತಲೇ ಮಾನವ ಸಂಬಂಧಗಳನ್ನು ಜೋಡಿಸಲು ಮತ್ತು ಗೌರವಿಸಲು ಕರೆ ಕೊಡುತ್ತದೆ. ಕುಟುಂಬ ಸಂಬಂಧವನ್ನು ಅದು ಆಧ್ಯಾತ್ಮಿಕತೆಯೊಂದಿಗೆ ಜೋಡಿಸುತ್ತದೆ. ಗೂಗಲ್‍ನಲ್ಲಿ ಸರ್ಚ್ ಮಾಡುವ ಬೆರಳುಗಳಿಗೆ ನೈತಿಕತೆಯ ಪಾಠವನ್ನು ಹೇಳಿಕೊಡುತ್ತದೆ. ಹುಡುಕಾಟದ ಜಗತ್ತಿನಲ್ಲಿ ಏನನ್ನು ಹುಡುಕಬೇಕು ಮತ್ತು ಯಾಕೆ ಹುಡುಕಬೇಕು ಎಂಬುದನ್ನು ಅದು ಹೇಳಿಕೊಡುತ್ತದೆ. ಆದ್ದರಿಂದಲೇ, ರಮಝಾನ್ ನಮಗೆ ಮುಖ್ಯವಾಗಬೇಕು. ಮಂಜುಗಡ್ಡೆಯಂತೆ ಕರಗುತ್ತಿರುವ ಮೌಲ್ಯಗಳು ಮತ್ತು ಕೌಟುಂಬಿಕ ಸಂಬಂಧಗಳ ಬಗ್ಗೆ ನಮ್ಮನ್ನು ಎಚ್ಚರಿಸುವುದಕ್ಕೆ ಅದು ಕರೆಗಂಟೆಯಾಗಬೇಕು. ಗೂಗಲ್ ಸರ್ಚ್‍ನಲ್ಲಿ ಸಿಗದ ಅತ್ತೆ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಮತ್ತು ಆಯುಷ್ಯದ ಬಗ್ಗೆ ಆಲೋಚಿಸಲು, ಪರಸ್ಪರ ಮಿಡಿಯಲು ಹಾಗೂ ಬೆರೆಯಲು ರಮಝಾನ್ ನಮಗೆ ಪ್ರೇರಕವಾಗಬೇಕು. ಕರಗುವುದು ಮಂಜುಗಡ್ಡೆಯ ಸಹಜ ಗುಣ. ಆದರೆ ನಮ್ಮ ಗುಣ ಕಟ್ಟುವುದಾಗಿರಲಿ.

No comments:
Post a Comment