Monday 23 August 2021

ಜೊಲ್ಲೆಗೆ ವಕ್ಫ್, ಅಫ್ಸರ್ ಗೆ ಥಳಿತ: ಅನ್ಯಾಯವೇ ನ್ಯಾಯವೆನ್ನಿಸುವುದು ಏಕೆ?



 ಸನ್ಮಾರ್ಗ ಸಂಪಾದಕೀಯ 
ಕಳೆದವಾರ ಗಮನಿಸಲೇಬೇಕಾದ ಮೂರು ಘಟನೆಗಳು ನಡೆದುವು.


1. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಶೇ. 27ರಷ್ಟು ಸ್ಥಾನಗಳನ್ನು ಇತರ ಹಿಂದುಳಿದ ವಿಭಾಗಗಳಿಗೆ (OBC) ಮೀಸ ಲಿಡುವುದಾಗಿ ಒಡಿಸ್ಸಾದಲ್ಲಿ ಆಡಳಿತ ನಡೆಸುತ್ತಿರುವ ಬಿಜು ಜನತಾದಳ ಪಕ್ಷವು ಘೋಷಿಸಿದೆ. ಭಾರತದ ರಾಜಕೀಯ ಪಕ್ಷಗಳಲ್ಲೇ  ಇಂಥ  ಘೋಷಣೆ ಇದೇ ಮೊದಲು.

2. ದೆಹಲಿಯಲ್ಲಿ 9 ವರ್ಷದ ದಲಿತ ಹೆಣ್ಣು ಮಗಳ ಅತ್ಯಾಚಾರ ಮತ್ತು ಕ್ರೂರ ಹತ್ಯೆಯ ವಿರುದ್ಧ ರಾಜಕೀಯ ಪಕ್ಷಗಳೆಲ್ಲ ಧ್ವನಿಯೆತ್ತಿವೆ.  ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆ ಕುರಿತಾದ ವೀಡಿಯೋವನ್ನು ಟ್ವಿಟರ್‍ ನಲ್ಲಿ  ಅ ಪ್‍ಲೋಡ್ ಮಾಡಿದರು. ಮಾತ್ರವಲ್ಲ, ಕಾಂಗ್ರೆಸ್‍ನ ರಾಷ್ಟ್ರೀಯ ದಲಿತ್ ಮುಖಂಡ ಉದಿತ್ ರಾಜ್ ಅವರು ಪತ್ರಿಕಾಗೋಷ್ಠಿ ನಡೆಸಿ, ಆ  ಘಟನೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಸಂಘಪರಿವಾರದ ಯಾವ ನಾಯಕರೂ ಸಂತ್ರಸ್ತ ಕುಟುಂಬ  ವಾಸವಿರುವ ನಂಗಲ್ ಗ್ರಾಮಕ್ಕೆ ಭೇಟಿ ನೀಡಿಲ್ಲ. ದೆಹಲಿ ಕಂಟೈನ್ಮೆಂಟ್ ವಲಯದಲ್ಲೇ  ಈ ಪ್ರದೇಶವಿದ್ದರೂ ಆ ಕುಟುಂಬವನ್ನು  ಭೇಟಿಯಾಗಿ ಸಾಂತ್ವನ ವ್ಯಕ್ತಪಡಿಸಿಲ್ಲ. ಒಂದುವೇಳೆ, ಗೋವೊಂದು ಹತ್ಯೆಗೀಡಾಗಿದ್ದರೆ ಇವರ ಸಾವಿರಾರು ಮಂದಿ ಅಲ್ಲಿ ಸೇರುತ್ತಿದ್ದರು.  ಬಿಜೆಪಿ ಮತ್ತು ಪರಿವಾರವು ದಲಿತರಿಗೆ ಗೋವಿನಷ್ಟೂ ಬೆಲೆಯನ್ನು ನೀಡುತ್ತಿಲ್ಲ ಎಂದು ಸಿಟ್ಟಾದರು.

3. ಅಫ್ಸರ್ ಅಹ್ಮದ್ ಎಂಬ ರಿಕ್ಷಾ ಚಾಲಕನನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಘಪರಿವಾರಕ್ಕೆ ಸೇರಿದ ಮಂದಿ ಥಳಿಸಿದರು.  ಥಳಿಸುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಜೈಶ್ರೀರಾಮ್ ಎಂದು ಆತನಿಂದ ಹೇಳಿಸಿದರು. ಈ ಎಲ್ಲ ಕ್ರೌರ್ಯವೂ ಅಫ್ಸರ್ ಅಹ್ಮದ್‍ರ  7 ವರ್ಷದ ಪುಟ್ಟ ಮಗಳ ಮುಂದೆಯೇ ನಡೆಯಿತು. ಮಗು ಅಪ್ಪನನ್ನು ಅಪ್ಪಿ ಹಿಡಿದು ಅಳುತ್ತಿತ್ತು ಮತ್ತು ಥಳಿಸಬೇಡಿ ಎಂದು  ಹ¯್ಲÉಕೋರರೊಂದಿಗೆ ವಿನಂತಿಸುತ್ತಿತ್ತು. ಆ ಬಳಿಕ ಪೊಲೀಸರು ಅಜಯ್, ರಾಹುಲ್ ಕುಮಾರ್ ಮತ್ತು ಅಮನ್ ಗುಪ್ತಾ ಎಂಬವರನ್ನು  ಬಂಧಿಸಿದರು ಮತ್ತು 24 ಗಂಟೆಯೊಳಗಡೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ  ಪೊಲೀಸು ಠಾಣೆಯ ಮುಂದೆ ಸಂಘಪರಿವಾರದ ಮಂದಿ ಪ್ರತಿಭಟನೆಯನ್ನೂ ನಡೆಸಿದ್ದರು.

ಈ ಮೂರೂ ಘಟನೆಗಳಲ್ಲಿ ಎದ್ದು ಕಾಣುವ ಕೆಲವು ಅಂಶಗಳಿವೆ. ಪಾರ್ಲಿಮೆಂಟ್‍ನಲ್ಲಾಗಲಿ, ರಾಜ್ಯ ವಿಧಾನಸಭೆಗಳಲ್ಲಾಗಲಿ ಮುಸ್ಲಿಮರ  ಪ್ರಾತಿನಿಧ್ಯ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಾ ಬರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಮಂದಿ  ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಿದ್ದರೂ ಒಬ್ಬರೂ ಗೆಲ್ಲಲಿಲ್ಲ. ಈಗಿರುವ 27 ಮುಸ್ಲಿಮ್ ಸಂಸದರಲ್ಲಿ 5 ಮಂದಿ ತೃಣಮೂಲ  ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರೆ, 4 ಮಂದಿ ಕಾಂಗ್ರೆಸ್‍ನಿಂದ ಮತ್ತು ತಲಾ ಮೂರು ಮಂದಿ ಸಮಾಜವಾದಿ ಪಾರ್ಟಿ, ಬಹುಜನ  ಸಮಾಜವಾದಿ ಪಾರ್ಟಿ, ಎನ್‍ಸಿಪಿ ಮತ್ತು ಮುಸ್ಲಿಮ್ ಲೀಗ್‍ನಿಂದ ಆಯ್ಕೆಯಾಗಿದ್ದಾರೆ. 2014ರ ಲೋಕಸಭೆಯಲ್ಲಿ 23 ಮುಸ್ಲಿಮ್  ಸಂಸದರಷ್ಟೇ ಇದ್ದರು ಎಂಬುದನ್ನು ಪರಿಗಣಿಸಿದರೆ ಈಗಿನ 27 ಸಂಖ್ಯೆ ಖಂಡಿತ ಹೆಚ್ಚೇ. ಆದರೂ ಇವರಲ್ಲಿ ಒಬ್ಬರೂ ಆಡಳಿತಾರೂಢ  ಬಿಜೆಪಿ ಪಕ್ಷದವರಿಲ್ಲ ಎಂಬುದೂ ಗಮನಾರ್ಹ ಸಂಗತಿ. ಹಾಗೆಯೇ, ತನ್ನ 303 ಸಂಸದರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದರ  ಇಲ್ಲ ಎಂಬ ಬಗ್ಗೆ ಬಿಜೆಪಿಗೆ ಯಾವ ಕಳವಳದ ಭಾವವೂ ಇಲ್ಲ ಎಂಬುದು ಬಹು ಆತಂಕದ ಸಂಗತಿ. ಇದೇವೇಳೆ,

ವಿಧಾನಸಭೆಗಳಲ್ಲಂತೂ ಮುಸ್ಲಿಮ್ ಶಾಸಕರ ಇಳಿಮುಖವನ್ನು ಪದೇಪದೇ ದಾಖಲಿಸುತ್ತಲೇ ಬರುತ್ತಿದೆ. 2018ರಲ್ಲಿ ಕರ್ನಾಟಕ ವಿಧಾನ  ಸಭೆಗೆ ನಡೆದ ಚುನಾವಣೆಯಲ್ಲಿ ಕೇವಲ 7 ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು.  ಕಳೆದ 10 ವರ್ಷಗಳಲ್ಲೇ  ಅತ್ಯಂತ ಕಡಿಮೆ ಸಂಖ್ಯೆ ಇದು. 90 ಲಕ್ಷದಷ್ಟು ಮುಸ್ಲಿಮರು ರಾಜ್ಯದಲ್ಲಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿಯನ್ನು ಬಿಜೆಪಿ ಸ್ಪರ್ಧೆಗಿಳಿಸಲಿಲ್ಲ. ಕಾಂಗ್ರೆಸ್ 17 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ ದೇವೇಗೌಡರ ಜನತಾ  ದಳವು 8 ಮಂದಿಗೆ ಟಿಕೆಟ್ ನೀಡಿತ್ತು. 2013ರಲ್ಲಿ 11 ಮುಸ್ಲಿಮ್ ಶಾಸಕರು ರಾಜ್ಯ ವಿಧಾನಸಭೆಯಲ್ಲಿದ್ದರು. ಈಗಿನ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಲ್ಲ. ಮುಸ್ಲಿಮರಿಗೇ ಸಂಬಂಧಿಸಿದ ಹಜ್ಜ್ ಮತ್ತು ವಕ್ಫ್  ಖಾತೆಯನ್ನು ಶಶಿಕಲಾ ಜೊಲ್ಲೆ  ನಿರ್ವಹಿಸುತ್ತಿದ್ದಾರೆ. ಆದರೂ,

ಕುಸಿಯುತ್ತಿರುವ ಮುಸ್ಲಿಮ್ ಪ್ರಾತಿನಿಧ್ಯದ ಬಗ್ಗೆ ಆತಂಕವನ್ನಾಗಲಿ ಅಥವಾ ಪ್ರಾತಿನಿಧ್ಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಯೋಜನೆಗಳನ್ನು  ಘೋಷಿಸುವುದನ್ನಾಗಲಿ ಯಾವ ಪಕ್ಷವೂ ಮಾಡುತ್ತಿಲ್ಲ. ಇತರ ಹಿಂದುಳಿತ ವರ್ಗಗಳಿಗೆ ಬಿಜು ಜನತಾ ದಳ ಘೋಷಿಸಿದ  ಮೀಸಲಾತಿಯಂತೆ, ಮುಸ್ಲಿಮ್ ಮತ್ತು ಕ್ರೈಸ್ತ ವಿಭಾಗಗಳಿಗೆ ಯಾಕೆ ರಾಜಕೀಯ ಪಕ್ಷಗಳು ಮೀಸಲಾತಿಯನ್ನು ಘೋಷಿಸಬಾರದು? ರಾಜ್ಯ ವಿಧಾ ನಸಭೆಯಲ್ಲಾಗಲಿ ಲೋಕಸಭೆಯಲ್ಲಾಗಲಿ ಮುಸ್ಲಿಮ್ ಜನಪ್ರತಿನಿಧಿಯನ್ನು ಹೊಂದಿರದ ಬಿಜೆಪಿ ಯಾಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ  ಇಡಬಾರದು? ಹಾಗಂತ,

ಇದು ಕೇವಲ ಮುಸ್ಲಿಮ್ ಪ್ರಾತಿನಿಧ್ಯಕ್ಕೆ ಮಾತ್ರ ಕೇಳಬೇಕಾದ ಪ್ರಶ್ನೆಯಲ್ಲ, ಕಾನ್ಪುರದ ಅಫ್ಸರ್ ಅಹ್ಮದ್‍ಗೆ ಸಂಬಂಧಿಸಿಯೂ ಇವೇ ಪ್ರ ಶ್ನೆಗಳನ್ನು ಕೇಳಬೇಕಾಗುತ್ತದೆ. ದೆಹಲಿಯ ದಲಿತ ಹೆಣ್ಣು ಮಗಳ ಅತ್ಯಾಚಾರ-ಹತ್ಯೆಯನ್ನು ಗಟ್ಟಿ ಧ್ವನಿಯಲ್ಲಿ ಕಾಂಗ್ರೆಸ್‍ನ ದಲಿತ  ಮುಖಂಡರು ಪ್ರಶ್ನಿಸುತ್ತಾರೆ. ಬಿಜೆಪಿಯನ್ನು ತರಾಟೆಗೆ ಎತ್ತಿಕೊಳ್ಳುತ್ತಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಸಂತ್ರಸ್ತ  ಕುಟುಂಬವನ್ನು ಭೇಟಿಯಾಗುತ್ತಾರೆ. ಉತ್ತರ ಪ್ರದೇಶದ ಹಾಥರಸ್ ಘಟನೆಯಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿತ್ತು. ಕಾಂಗ್ರೆಸ್ ಅತ್ಯಂತ  ಮುಂಚೂಣಿಯಲ್ಲಿ ನಿಂತು ಆ ಕ್ರೌರ್ಯವನ್ನು ಪ್ರಶ್ನಿಸಿತು. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಸರ್ವ ತಡೆಯನ್ನೂ ಬೇಧಿಸಿ  ಹಾಥರಸ್‍ಗೆ ಭೇಟಿ ಕೊಟ್ಟರು. ಇದು ಆಗಬೇಕಾದದ್ದೇ. ಆದರೆ ಕಾನ್ಪುರದ ಅಫ್ಸರ್ ಅಹ್ಮದ್ ಸಹಿತ ಮುಸ್ಲಿಮರ ಮೇಲೆ ಪದೇ ಪದೇ ಈ  ದೇಶದ ವಿವಿಧ ಭಾಗಗಳಲ್ಲಿ ಹಲ್ಲೆ, ಥಳಿತ, ಅವಮಾನಗಳಾಗುತ್ತಿದ್ದರೂ ಬಿಜೆಪಿ ಸಹಿತ ರಾಜಕೀಯ ಪಕ್ಷಗಳು ತೀರಾ ನಿರ್ಲಕ್ಷ್ಯ  ಭಾವದಲ್ಲಿ  ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವಂತೆ ಕಾಣಿಸುತ್ತಿದೆ. ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ಶರಣಾಗತ ಭಾವದಲ್ಲಿ ಬದುಕಬೇಕಾದ  ಸಮುದಾಯ ಎಂಬ ರೀತಿಯಲ್ಲಿ ಅವು ವರ್ತಿಸುತ್ತಿವೆ. ದೆಹಲಿಯ ಘಟನೆಗೆ ಸಂಬಂಧಿಸಿ ದಲಿತ ಮುಖಂಡ ಉದಿತ್ ರಾಜ್ ವ್ಯಕ್ತ ಪಡಿಸಿದಷ್ಟು ಗಟ್ಟಿ ಧ್ವನಿಯಲ್ಲಿ ಮತ್ತು ಸ್ಪಷ್ಟ ಮಾತಿನಲ್ಲಿ ಅಫ್ಸರ್ ಅಹ್ಮದ್ ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಯಾವೊಬ್ಬ ಮುಸ್ಲಿಮ್  ಸಂಸದರೂ ಮುಂದೆ ಬಂದಿಲ್ಲವೇಕೆ? ಬಿಜೆಪಿಯೇಕೆ ಮೌನವಾಗಿದೆ? ಮೂವರು ಆರೋಪಿಗಳು 24 ಗಂಟೆಯೊಳಗೆ ಸ್ಟೇಷನ್ ಜಾಮೀನಿನ ಮೂಲಕ ಬಿಡುಗಡೆಗೊಂಡುದುದನ್ನು ಯಾಕೆ ಅದು ಪ್ರಶ್ನಿಸಿಲ್ಲ? ಮುಸ್ಲಿಮರ ಹಿತ ಕಾಯುವ ಮತ್ತು ಓಲೈಕೆ ಮಾಡದ ನೈಜ ಪಕ್ಷ  ತಮ್ಮದು ಎಂದು ಹೇಳಿಕೊಳ್ಳುವ ಬಿಜೆಪಿಯು, ಹಿತ ಕಾಯಬೇಕಾದ ಸಂದರ್ಭದಲ್ಲಿ ಅಹಿತ ಬಯಸುವವರ ಜೊತೆಗೆ  ನಿಂತುಕೊಂಡಿರುವುದೇಕೆ?

ದೇಶದಲ್ಲಿ ಸದ್ಯ ಎಂಥ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆಯೆಂದರೆ, ಮುಸ್ಲಿಮರ ಮೇಲೆ ಬಹಿರಂಗವಾಗಿ ಅನ್ಯಾಯ  ಮಾಡಲಾಗುತ್ತಿದ್ದರೂ ಅದನ್ನು ಪ್ರಶ್ನಿಸುವ ಹಾಗಿಲ್ಲ. ಪ್ರಶ್ನಿಸಿದರೆ ಅದು ಮುಸ್ಲಿಮ್ ಓಲೈಕೆಯಾಗುತ್ತದೆ. ಯಾವ ರಾಜಕೀಯ ಪಕ್ಷ  ಅಂಥದ್ದೊಂದು  ಪ್ರಯತ್ನ ಮಾಡುತ್ತದೋ ಅದನ್ನು ಮುಸ್ಲಿಮ್ ಪರ ಮತ್ತು ಹಿಂದೂ ವಿರೋಧಿ ಎಂದು ಕರೆಯಲಾಗುತ್ತದೆ. ಇಂಥ  ಮುದ್ರೆಯೊತ್ತುವ ಅಭಿಯಾನವನ್ನು ಆರಂಭಿಸಿರುವುದು ಬಿಜೆಪಿಯೇ. ಅದರದೇ ಬೆಂಬಲಿಗರು ಮುಸ್ಲಿಮರನ್ನು ಥಳಿಸುವ ಮತ್ತು  ಹಿಂಸಿಸುವ ಕೃತ್ಯದ ಆರೋಪಿಗಳಾಗಿರುತ್ತಾರೆ. ದನದ ಹೆಸರಲ್ಲಿ, ಮತಾಂತರ, ಚುಡಾವಣೆ ಮತ್ತಿನ್ನೇನೋ ಸಿದ್ಧ ಆರೋಪಗಳನ್ನು ಹೊರಿಸಿ  ಮುಸ್ಲಿಮರ ಮೇಲೆ ಅನ್ಯಾಯವೆಸಗುತ್ತಾರೆ. ಯಾರಾದರೂ ಈ ಅನ್ಯಾಯವನ್ನು ಪ್ರಶ್ನಿಸಿದರೆ ತಕ್ಷಣ ಅವರಿಗೆ ದೇಶವಿರೋಧಿ, ಮುಸ್ಲಿಮ್  ಓಲೈಕೆಯ ಪಟ್ಟ ಕಟ್ಟುತ್ತಾರೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ.

ಒಂದು ಸಮುದಾಯವನ್ನು ಅನ್ಯಾಯದ ಬೇಗುದಿಗೆ ತಳ್ಳಿ ಯಾವುದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ  ಸರ್ವ ಸಮುದಾಯಗಳ ಪಾಲು ಅತೀ ಅಗತ್ಯ. ಶಾಸಕಾಂಗದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಸಮುದಾಯಗಳೂ ಸಮಾನ  ಪ್ರಾತಿನಿಧ್ಯವನ್ನು ಹೊಂದುವುದು ಮತ್ತು ಸಮಾನ ನ್ಯಾಯ ಎಲ್ಲ ಸಮುದಾಯಗಳಿಗೂ ದಕ್ಕುವುದು ಬಹುಮುಖ್ಯ. ದೇಶದ ಅಭಿವೃದ್ಧಿಗೆ  ಯಾವುದೇ ಸಮುದಾಯ ಕೊಡುಗೆಯನ್ನು ನೀಡಬೇಕಾದರೆ ನ್ಯಾಯ ವಿತರಣೆಯ ದೃಷ್ಟಿಯಿಂದ ಆ ಸಮುದಾಯ ತೃಪ್ತಿಯಿಂದಿರಬೇಕು.  ಸಂತ್ರಸ್ತ ಭಾವವು ದೇಶಕ್ಕೇ ಹೊರೆ ಮತ್ತು ಅಪಾಯಕಾರಿ.

Tuesday 17 August 2021

ಪ್ರಧಾನಿಯನ್ನು ನೋಡಿ ನಗುತ್ತಿರುವ 230 ಕೋಟಿ ರೂಪಾಯಿ ಮತ್ತು ಕಪಿಲ್‌ದೇವ್




ಗುಜರಾತ್‌ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂನಿಂದ ಹಿಡಿದು ಕೊರೋನಾ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ವರೆಗೆ ಎಲ್ಲೆಲ್ಲೂ ತನ್ನ ಫೋಟೋ  ಮತ್ತು ಹೆಸರನ್ನು ಛಾಪಿಸಿಕೊಂಡಿರುವ ಪ್ರಧಾನಿ ಮೋದಿಯವರು, ರಾಜೀವ್ ಗಾಂಧಿ ಖೇಲ್ ರತ್ನದ ಹೆಸರನ್ನು ‘ಮೇಜರ್ ಧ್ಯಾನ್‌ಚಂದ್  ಖೇಲ್ ರತ್ನ’ ಎಂದು ಬದಲಾಯಿಸಿರುವುದು ಅಗ್ಗದ ರಾಜಕೀಯವೇ ಹೊರತು ಇದರಲ್ಲಿ ಮುತ್ಸದ್ದಿತನವೂ ಇಲ್ಲ, ಕ್ರೀಡೆಗೆ ಪ್ರೋತ್ಸಾಹವೂ  ಇಲ್ಲ. ತಮಾಷೆ ಏನೆಂದರೆ,

 ಸ್ವತಃ ಮೋದಿಯವರೇ ಈ ಹೆಸರು ಬದಲಾವಣೆಯನ್ನು ಘೋಷಿಸಿದ್ದಾರೆ. ಅದೇವೇಳೆ, ಗುಜರಾತ್‌ನಲ್ಲಿರುವ  ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ತನ್ನದೇ ಹೆಸರಿಟ್ಟುಕೊಳ್ಳುವಾಗ ಈ ದೇಶಕ್ಕೆ ಮೊಟ್ಟಮೊದಲ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು  ತಂದುಕೊಟ್ಟ ಕಪಿಲ್ ದೇವ್ ಅವರ ನೆನಪಿಗೆ ಬಂದಿಲ್ಲ. ಒಂದು ಬಗೆಯ ಅತ್ಮರತಿ ಮನಸ್ಥಿತಿ ಇದು. ಹಾಕಿ ದಂತಕತೆ ಧ್ಯಾನ್‌ಚಂದ್‌ರನ್ನು  ಗೌರವಿಸಬೇಕೆಂದಿದ್ದರೆ ರಾಜೀವ್ ಗಾಂಧಿಯನ್ನು ಅವಮಾನಿಸಬೇಕಿಲ್ಲ. ರಾಜೀವ್ ಗಾಂಧಿಯೇನೂ ವೀರಪ್ಪನ್ ಅಲ್ಲವಲ್ಲ. ಜನರಿಂದಲೇ  ಆರಿಸಿ ಬಂದು ಪ್ರಧಾನಿಯಾದವರು. ದೇಶವನ್ನು ಐದು ವರ್ಷಗಳ ಕಾಲ ಅವರು ಆಳಿದ್ದಾರೆ. ದೂರ ಸಂಪರ್ಕ ಕ್ರಾಂತಿಯಿಂದ ತೊಡಗಿ  ರಾಷ್ಟ್ರೀಯ ಶಿಕ್ಷಣ ನೀತಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ, ಎಂ.ಟಿ.ಎನ್.ಎಲ್. ಮತ್ತು ವಿಎಸ್‌ಎನ್‌ಎಲ್‌ನಂಥ ಕೊಡುಗೆಗಳನ್ನು  ದೇಶಕ್ಕೆ ನೀಡಿದ್ದಾರೆ. ಮಾಲ್ದೀವ್ಸ್ ಮತ್ತು ಶ್ರೀಲಂಕಾಗಳ ಬಂಡಾಯದಲ್ಲಿ ಕ್ಷಿಪ್ರ ಮಧ್ಯಪ್ರವೇಶ ಮಾಡಿ ಅಮೇರಿಕ ಮತ್ತು ಚೀನಾಗಳ ಉಪಸ್ಥಿತಿಯನ್ನು ತಡೆದು ನೆರೆಯನ್ನು ಭಾರತದ ಪಾಲಿಗೆ ಸುರಕ್ಷಿತಗೊಳಿಸಿದ್ದಾರೆ. ಅವರ ಹತ್ಯೆಯಾಗಿರುವುದು ಕೂಡ ಈ ಕಾರಣಕ್ಕಾಗಿಯೇ.  ಒಂದುವೇಳೆ,

ಶ್ರೀಲಂಕಾದ ಎಲ್‌ಟಿಟಿಇ ಸಂಘರ್ಷದಲ್ಲಿ ಭಾರತ ಮಧ್ಯಪ್ರವೇಶ ಮಾಡದೇ ಇರುತ್ತಿದ್ದರೆ, ಅಮೇರಿಕನ್ ಸೇನೆ ಆ ಕಡಲ ದ್ವೀಪಕ್ಕೆ ತನ್ನ  ಸೇನೆಯನ್ನು ಕಳುಹಿಸಿಕೊಡುವುದಕ್ಕೆ ಸರ್ವ ಸನ್ನದ್ಧವಾಗಿತ್ತು ಎಂಬುದು ಆ ಬಳಿಕ ಬಹಿರಂಗವಾಗಿತ್ತು. ಇದು ನಡೆದಿದ್ದರೆ ಭಾರತದ  ಪಕ್ಕದಲ್ಲಿ ಶತ್ರುವಿನ ಉಪಸ್ಥಿತಿಗೆ ಜಾಗ ಬಿಟ್ಟು ಕೊಟ್ಟಂತಾಗುತ್ತಿತ್ತು. ಆ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾದೊಂದಿಗಿದ್ದ ಸಂಬಂಧದಷ್ಟು ಒಳ್ಳೆಯ  ಸಂಬAಧ ಅಮೇರಿಕದ ಜೊತೆ ಇರಲಿಲ್ಲ ಎಂಬುದನ್ನೂ ಈ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಸ್ಯಾಮ್ ಪಿತ್ರೋಡರನ್ನು  ಬಳಸಿಕೊಂಡು ರಾಜೀವ್ ಗಾಂಧಿ ಈ ದೇಶದಲ್ಲಿ ಮಾಡಿದ ಸಂಪರ್ಕ ಕ್ರಾಂತಿಯ ಫಲವನ್ನೇ ಇವತ್ತು ಭಾರತೀಯರು ಉಣ್ಣುತ್ತಿದ್ದಾರೆ.  ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಕೊಡುಗೆ ಬಲುದೊಡ್ಡದು. ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ಮತ್ತು  ವಿದೇಶ್ ಸಂಚಾರ್ ನೆಟ್‌ವರ್ಕ್ ಲಿಮಿಟೆಡ್ ಎಂಬೆರಡು ಯೋಜನೆಗಳ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ದೂರವಾಣಿ  ಕರೆಗಳಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಕಮರ್ಷಿಯಲ್ ಏರ್‌ಲೈನ್ಸನ್ನು ಈ ದೇಶಕ್ಕೆ ಪರಿಚಯಿಸಿದ್ದು ಮತ್ತು ಆರ್ಥಿಕ  ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಪ್ರಾರಂಭಿಸಿದ್ದೂ ಅವರೇ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದುದು ಕೇವಲ 5 ವರ್ಷ. ಒಂದುವೇಳೆ,

ಧ್ಯಾನ್‌ಚಂದ್ ರನ್ನು ಗೌರವಿಸಬೇಕೆಂಬ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದ್ದಿದ್ದೇ  ಆಗಿದ್ದಲ್ಲಿ ಹೊಸ ಕ್ರೀಡಾಂಗಣಗಳಿಗೆ  ಅವರ ಹೆಸರಿಡುವ ಮೂಲಕ ಅದನ್ನು ತೋರ್ಪಡಿಸಬಹುದಿತ್ತು ಅಥವಾ ಹಾಕಿಗೇ ಮೀಸಲಾದ ಪ್ರಶಸ್ತಿಯನ್ನು ಘೋಷಿಸಿ ಅವರ  ಹೆಸರಿಡಬಹುದಿತ್ತು. ಇನ್ನೂ ಹೆಚ್ಚೆಂದರೆ, ಹಾಕಿ ಆಟಗಾರರಿಗೆ ಧನಸಹಾಯ, ಹೊಸ ಕ್ರೀಡಾಂಗಣಗಳ ನಿರ್ಮಾಣ, ಹಾಕಿ ಆಟಗಾರರಿಗೆ  ಮೂಲ ಸೌಕರ್ಯ ಒದಗಿಸುವುದು ಮತ್ತು ಅತ್ಯುತ್ತಮ ಗುಣಮಟ್ಟದ ಕೋಚಿಂಗ್ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬಹುದಿತ್ತು. ಅದುಬಿಟ್ಟು  ಅಸ್ತಿತ್ವದಲ್ಲಿರುವ ಜನಪ್ರಿಯ ಪ್ರಶಸ್ತಿಯ ಹೆಸರನ್ನು ಬದಲಿಸುವುದೆಂದರೆ, ಅದು ದ್ವೇಷ ರಾಜಕಾರಣದ ಭಾಗವಾಗಿ ಗುರುತಿಸಿಕೊಳ್ಳಬಹುದೇ  ಹೊರತು ಇನ್ನೇನಲ್ಲ. ದುರಂತ ಏನೆಂದರೆ,

2021-22ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರವನ್ನು ಕೇಂದ್ರ ಸರಕಾರ ಕಡೆಗಣಿಸಿದೆ. 2020-21ರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಮೊತ್ತಕ್ಕಿಂತ ಈ  ಬಾರಿ 230.78 ಕೋಟಿ ರೂಪಾಯಿಯನ್ನು ಕಡಿತಗೊಳಿಸಿದೆ. ಅದೂ ಒಲಿಂಪಿಕ್ಸ್ ನಡೆಯುವ ಈ ವರ್ಷದಲ್ಲೇ. ಒಂದು ಕಡೆ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಕರೆ ಮಾಡಿ ಧನ್ಯವಾದ ತಿಳಿಸುವ ಮೋದಿ, ಇನ್ನೊಂದೆಡೆ ಕ್ರೀಡಾಕ್ಷೇತ್ರಕ್ಕೆ ಉತ್ತೇಜನ ನೀಡುವುದರ ಬದಲು  ಹಣವನ್ನು ಕಡಿತಗೊಳಿಸುತ್ತಿದ್ದಾರೆ. ಆದರೆ, ಪದಕ ವಿಜೇತರೊಂದಿಗೆ ನಡೆಯುವ ಮಾತುಕತೆಯನ್ನು ಚಿತ್ರೀಕರಿಸಿಕೊಂಡು ಅಗ್ಗದ ಪ್ರಚಾರಕ್ಕೆ  ಇಳಿದಿದ್ದಾರೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ನಿರ್ದಿಷ್ಟ ಹೆಸರು ಬದಲಾವಣೆಯ ಕ್ರಮ ಚಾಲ್ತಿಯಲ್ಲಿದೆ. ವಿಶೇಷವಾಗಿ ಇಸ್ಲಾಮಿಕ್  ಪರಂಪರೆಯ ಹೆಸರುಗಳನ್ನು ದೊಡ್ಡ ಪ್ರಚಾರದೊಂದಿಗೆ ಬದಲಿಸಲಾಗಿದೆ. ಅಲಹಾಬಾದ್‌ನ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸಲಾಗಿದೆ. ಫೈಝಾಬಾದ್ ಜಿಲ್ಲೆಯು ಅಯೋಧ್ಯ ಜಿಲ್ಲೆಯಾಗಿ ಬದಲಾಗಿದೆ. ಮುಗಲ್‌ಸರಾಯಿ ರೈಲ್ವೆ ನಿಲ್ದಾಣವು ದೀನ್‌ದಯಾಳ್ ಉಪಾಧ್ಯಾಯ್ ನಗರವಾಗಿ ಪರಿವರ್ತಿತವಾಗಿದೆ. ಇದಲ್ಲದೇ, ವಾಜಪೇಯಿ ಹೆಸರನ್ನು ಕ್ರೀಡಾಂಗಣಕ್ಕೆ ಮತ್ತಿತರ ಯೋಜನೆಗಳಿಗೂ  ಇಡಲಾಗಿದೆ. ಒಂದುವೇಳೆ, ರಾಜೀವ್ ಗಾಂಧಿಯವರ ಹೆಸರಿನಲ್ಲಿ ಖೇಲ್‌ರತ್ನ ಪ್ರಶಸ್ತಿ ತಪ್ಪು ಎಂದಾದರೆ, ಮೊಟೇರಾ ಕ್ರೀಡಾಂಗಣಕ್ಕೆ  ಪ್ರಧಾನಿ ನರೇಂದ್ರ ಮೋದಿಯವರ ಹೆಸರೂ ತಪ್ಪೇ ಅಲ್ಲವೇ? ಕೊರೋನಾ ವ್ಯಾಕ್ಸಿನನ್ನು ಸಂಶೋಧಿಸಿದ್ದು ಪ್ರಧಾನಿ ಮೋದಿ ಅಲ್ಲವಲ್ಲ.  ಮತ್ತೇಕೆ ಸರ್ಟಿಫಿಕೇಟ್‌ನಲ್ಲಿ ಅವರ ಹೆಸರು? ಪೆಟ್ರೋಲ್ ಪಂಪ್‌ನ ಬಳಿ ತನ್ನ ಆಳೆತ್ತರದ ಕಟೌಟನ್ನು ತೂಗು ಹಾಕುವಂತೆ ಮೋದಿ  ನೋಡಿಕೊಂಡಿರುವುದೇಕೆ? ಪೆಟ್ರೋಲ್ ಸಂಶೋಧನೆಯಲ್ಲಿ ಅವರ ಪಾತ್ರವೇನು? ಪೆಟ್ರೋಲಿಯಂ ಕ್ಷೇತ್ರಕ್ಕೆ ಅವರ ಕೊಡುಗೆಯೇನು?  ವಾಜಪೇಯಿಯವರಿಗೆ ಸಂಬಂಧಿಸಿಯೂ ಇವೇ ಪ್ರಶ್ನೆಗಳನ್ನು ಎತ್ತಬಹುದು. ಒಂದುರೀತಿಯಲ್ಲಿ,

ಅತಿಕೆಟ್ಟ ಪರಂಪರೆಯೊಂದಕ್ಕೆ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ. ನಾಳೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದು ಈಗಿನ ನಾಮಕರಣಕ್ಕೆ  ಮರು ನಾಮಕರಣ ಮಾಡಲು ಹೊರಟರೆ ಏನಾದೀತು? ಆಗ ಅದನ್ನು ಖಂಡಿಸುವುದಕ್ಕೆ ಬಿಜೆಪಿಗೆ ಏನು ನೈತಿಕತೆಯಿರುತ್ತದೆ? ಈ  ನಡುವೆ ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡುವ ಇರಾದೆಯನ್ನು ರಾಜ್ಯ ಬಿಜೆಪಿ  ವ್ಯಕ್ತಪಡಿಸಿದೆ. ಒಂದುಕಡೆ, ಇಂದಿರಾ ಕ್ಯಾಂಟೀನ್‌ನ ಕತ್ತು ಹಿಸುಕುವುದನ್ನು ಮಾಡುತ್ತಲೇ ಇನ್ನೊಂದೆಡೆ ಹೆಸರು ಬದಲಾವಣೆಯ ಪುಕಾರ ನ್ನು ತೇಲಿ ಬಿಡುವುದರ ಅರ್ಥವೇನು? ಸಾಧ್ಯವಿದ್ದರೆ, ಇಂದಿರಾ ಕ್ಯಾಂಟೀನ್‌ಗಿಂತಲೂ ಉತ್ತಮ ಮತ್ತು ಜನಸ್ನೇಹಿಯಾಗಿರುವ ಯೋಜನೆಯನ್ನು ಆರಂಭಿಸಿ ಇದಕ್ಕೆ ತಮ್ಮಿಷ್ಟದ ಹೆಸರಿಡುವುದಕ್ಕೆ ಅರ್ಥವಿದೆ. ಅದುಬಿಟ್ಟು ಇರುವ ಹೆಸರನ್ನೇ ಬದಲಿಸುವುದರಿಂದ ಏನನ್ನೂ ಸಾ ಧಿಸಲು ಸಾಧ್ಯವಿಲ್ಲ. ನಿಜವಾಗಿ,

ದ್ವೇಷ ರಾಜಕಾರಣದ ಆಯುಷ್ಯ ಸಣ್ಣದು. ಯಾಕೆಂದರೆ, ಅದು ಮೆದುಳಿನಿಂದ ಅಲೋಚಿಸುವುದಿಲ್ಲ ಮತ್ತು ಹೃದಯದಿಂದ  ಮಾತಾಡುವುದಿಲ್ಲ. ಇದರಿಂದಾಗಿಯೇ ಬಾರಿಬಾರಿಗೂ ತಪ್ಪುಗಳು ಸಂಭವಿಸುತ್ತಲೇ ಇರುವುದು. ತನ್ನದೇ ಹೆಸರನ್ನು ಗುಜರಾತ್‌ನ  ಮೊಟೇರಾ ಕ್ರೀಡಾಂಗಣಕ್ಕೆ ಇಟ್ಟು ಖೇಲ್‌ರತ್ನ ಪ್ರಶಸ್ತಿಯಿಂದ ರಾಜೀವ್ ಗಾಂಧಿ ಹೆಸರನ್ನು ಮೋದಿ ಕಿತ್ತು ಹಾಕಿರುವುದು ಇದಕ್ಕೊಂದು  ಪುರಾವೆ. ಬಿಜೆಪಿಯ ಭ್ರಷ್ಟ ನಾಯಕರ ವಿರುದ್ಧ ಒಂದೇ ಒಂದು ದಾಳಿಯನ್ನೂ ಮಾಡದ ಕೇಂದ್ರದ ಇ.ಡಿ. ಮತ್ತು ಐಟಿ ಇಲಾಖೆಗಳು  ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವುದೂ ಇದಕ್ಕೆ ಪುರಾವೆ. ಮುಸ್ಲಿಮರ  ತ್ರಿವಳಿ ತಲಾಕ್ ಕ್ರಮವನ್ನು ಕ್ರಿಮಿನಲ್ ರೀತಿಯ ವಿಚಾರಣೆಗೆ ಒಳಪಡಿಸುವ ಕಾನೂನು ತರುತ್ತಲೇ, ಹಿಂದೂಗಳ ವಿಚ್ಛೇದನವನ್ನು ಸಿವಿಲ್  ವಿಚಾರಣಾ ಕ್ರಮದಲ್ಲಿರುವಂತೆ ನೋಡಿಕೊಂಡಿರುವುದೂ ಇದಕ್ಕೆ ಪುರಾವೆ. ವಿದೇಶಕ್ಕೆ ಗೋಮಾಂಸ ರಫ್ತು ಮಾಡುತ್ತಲೇ ದೇಶದಲ್ಲಿ  ಗೋಹತ್ಯಾ ನಿಷೇಧದ ಬಗ್ಗೆ ಮಾತಾಡುತ್ತಿರುವುದೂ ಇದಕ್ಕೆ ಪುರಾವೆ. ತನ್ನದೇ ಆಡಳಿತ ಇರುವ ಈಶಾನ್ಯ ಮತ್ತು ಗೋವಾ ರಾಜ್ಯಗಳಲ್ಲಿ  ಗೋವಧೆ ಮತ್ತು ಗೋಮಾಂಸ ಮಾರಾಟಕ್ಕೆ ಅನುಮತಿ ನೀಡುತ್ತಲೇ ಕರ್ನಾಟಕ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಗೋಮಾಂಸ  ನಿಷೇಧದ ಕಠಿಣ ಕಾನೂನನ್ನು ಜಾರಿಗೆ ತಂದಿರುವುದೂ ಇದಕ್ಕೊಂದು ಪುರಾವೆ.

ದ್ವೇಷವೇ ರಾಜಕೀಯವಾದಾಗ ತಪ್ಪುಗಳೇ ಕಾನೂನಾಗಿ ಜಾರಿಯಾಗುತ್ತದೆ. ಗುಜರಾತ್‌ನ ಮೊಟೇರಾಕ್ಕೆ ಹೆಸರಿಡುವಾಗ ಮೋದಿಯವರಿಗೆ  198ರ ಹೀರೋ ಕಪಿಲ್ ದೇವ್ ಕಾಣಿಸಲಿಲ್ಲ. ಆದರೆ, ಖೇಲ್ ರತ್ನಕ್ಕೆ ಧ್ಯಾನ್‌ಚಂದ್ ಕಾಣಿಸಿದರು. ಮೋದಿಯ ಸಣ್ಣತನಕ್ಕೆ ಈ ದ್ವಂದ್ವವೇ  ಸಾಕ್ಷಿ. 

Monday 9 August 2021

ಬುರ್ಖಾವನ್ನು ಶೋಷಣೆ ಎಂದವರ ದ್ವಂದ್ವವನ್ನು ಬಿಚ್ಚಿಟ್ಟ ಆಟಗಾರ್ತಿಯರು




ಹೆಣ್ಣು-ಗಂಡು ಸಮಾನತೆಯ ಬಗ್ಗೆ ಜಗತ್ತಿಗೆ ಆಗಾಗ ಪಾಠ ಮಾಡುವ ಮುಂದುವರಿದ ರಾಷ್ಟçಗಳು ನಿಜಕ್ಕೂ ಹೆಣ್ಣಿನ ಬಗ್ಗೆ ಯಾವ ಮ ನಸ್ಥಿತಿಯನ್ನು ಹೊಂದಿವೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ದುರ್ಬೀನಿನ ಅಗತ್ಯವೇನೂ ಇಲ್ಲ. ಇದಕ್ಕೆ ಯೂರೋ 2021 ಬೀಚ್  ಹ್ಯಾಂಡ್‌ಬಾಲ್ ಟೂರ್ನಿಯೇ ಸಾಕು ಇಲ್ಲವೇ ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸೂ ಸಾಕು. ಮತ್ತೂ ಬೇಕೆಂದರೆ, 2018ರ ಫ್ರೆಂಚ್  ಓಪನ್ ಟೆನ್ನಿಸನ್ನೂ ಎತ್ತಿಕೊಳ್ಳಬಹುದು. ಬುರ್ಖಾವನ್ನು ಮಹಿಳಾ ಸ್ವಾತಂತ್ರ‍್ಯದ ವಿರೋಧಿಯಾಗಿ, ಹಕ್ಕು ಹರಣವಾಗಿ ಮತ್ತು ಪುರುಷ  ಸಮಾಜದ ಹೇರಿಕೆಯಾಗಿ ಆಗಾಗ ವ್ಯಾಖ್ಯಾನಿಸುತ್ತಾ ಮುಸ್ಲಿಮ್ ಮಹಿಳೆಯರ ಬಗ್ಗೆ ಕರುಣಾಪೂರಿತ ದೃಷ್ಟಿ ಬೀರುವ ಈ ರಾಷ್ಟçಗಳು  ಆಂತರಿಕವಾಗಿ ಎಷ್ಟು ಹೆಣ್ಣು ವಿರೋಧಿಯಾಗಿವೆ ಮತ್ತು ಹೆಣ್ಣನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು  ಅರಿತುಕೊಳ್ಳುವುದಕ್ಕೂ ಈ ಮೇಲಿನ ಉದಾಹರಣೆಗಳು ಸಾಕು.
2021 ಜುಲೈ 26ರಂದು ಜಪಾನ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವುದಕ್ಕಿAತ ವಾರಗಳ ಮೊದಲು ಯೂರೋ 2021  ಬೀಚ್ ಹ್ಯಾಂಡ್‌ಬಾಲ್ 2021 ಪಂದ್ಯಾಟ ನಡೆದಿತ್ತು. ಯುರೋಪಿಯನ್ ರಾಷ್ಟçಗಳ ನಡುವಿನ ಬಹಳ ಪ್ರಸಿದ್ಧ ಮತ್ತು ಭಾರೀ ಪ್ರೇP್ಷÀಕರನ್ನು  ಹೊಂದಿರುವ ಪಂದ್ಯಾಟ ಇದು. ಜುಲೈ 18ರಂದು ಸ್ಪೆÊನ್ ಮತ್ತು ನಾರ್ವೆ ಮಹಿಳಾ ತಂಡಗಳ ನಡುವೆ ಪಂದ್ಯಾಟ ನಡೆಯಿತು. ಆದರೆ ಈ  ಪಂದ್ಯ ಆಟಕ್ಕಿಂತ ಹೆಚ್ಚು ಈ ಆಟದಲ್ಲಿ ನಾರ್ವೆ ಮಹಿಳಾ ಆಟಗಾರ್ತಿಯರು ಧರಿಸಿದ ಬಟ್ಟೆಗಾಗಿ ಸುದ್ದಿಯಾಯಿತು. ಅಂತಾರಾಷ್ಟಿçÃಯ  ಬೀಚ್ ಹ್ಯಾಂಡ್‌ಬಾಲ್ ಫೆಡರೇಶನ್ ನಿಯಮದ ಪ್ರಕಾರ, ಆಟಗಾರ್ತಿಯರು ಬಿಕಿನಿ ಬಾಟಮ್ ದಿರಿಸನ್ನು ಧರಿಸುವುದು ಕಡ್ಡಾಯ.  ದಿರಿಸಿನ ಕೆಳಭಾಗವು ಮೈಗೆ ಆಂಟಿಕೊAಡಿರಬೇಕು. ವಿ ಆಕಾರದಲ್ಲಿ ಈ ಬಿಕಿನಿಯ ಕೆಳಭಾಗ ಇರಬೇಕು. ದಿರಿಸಿದ ಬಗ್ಗೆ ಈ ನಿಯಮ  ಎಷ್ಟು ನಿಖರವಾಗಿದೆಯೆಂದರೆ, ಬಿಕಿನಿಯ ಕೆಳಭಾಗವು ಗರಿಷ್ಠವೆಂದರೆ, 10 ಸೆ.ಮೀಟರ್ ಇರಬಹುದು. ಅದಕ್ಕಿಂತ ಹೆಚ್ಚು ಇರುವುದು ಕಾ ನೂನುಬಾಹಿರ. ವಿಶೇಷ ಏನೆಂದರೆ,
ನಾರ್ವೆ ಆಟಗಾರ್ತಿಯರು ಈ ಬಿಕಿನಿಯಲ್ಲಿ ನಾವು ಆಡುವುದಿಲ್ಲ ಎಂದು ಹಠ ಹಿಡಿದರು. ಬಿಕಿನಿಯ ಬದಲು ಅಥ್ಲೆಟಿಕ್ ಶಾರ್ಟ್ಸ್ ಧರಿಸಿ  ಆಡಿದರು. ಅಷ್ಟಕ್ಕೇ ಮುಗಿಯಲಿಲ್ಲ. ಹೀಗೆ ಬಿಕಿನಿ ಧರಿಸಲು ಒಪ್ಪದ ನಾರ್ವೆಯನ್ ತಂಡದ ಒಬ್ಬೊಬ್ಬ ಆಟಗಾರ್ತಿಗೆ ಹ್ಯಾಂಡ್‌ಬಾಲ್  ಫೆಡರೇಶನ್ 177 ಡಾಲರ್ ದಂಡ ವಿಧಿಸಿ ಸೇಡು ತೀರಿಸಿಕೊಂಡಿತು. ಹಾಗಂತ,
ಈ ಡ್ರೆಸ್ ಕೋಡ್ ಹೆಣ್ಣಿಗೆ ಮಾತ್ರ. ಪುರುಷರ ಹ್ಯಾಂಡ್‌ಬಾಲ್ ಪಂದ್ಯಾಟಕ್ಕೆ ದಿರಿಸಿಗೆ ಸಂಬAಧಿಸಿ ಇಂಥ ಕಠಿಣ ನಿಬಂಧನೆಗಳಿಲ್ಲ. ಅವರು  ಮೈಗೆ ಅಂಟಿಕೊಳ್ಳದ ಶಾರ್ಟ್ಸ್ ಧರಿಸಿ ಆಡಬಹುದು.
2018ರ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಮೆಂಟ್‌ನಲ್ಲೂ ಇಂಥz್ದೆÃ ಒಂದು ಘಟನೆ ನಡೆಯಿತು. ಅತಿ ಕಡಿಮೆ, ಅತಿ ಕಿರಿದು ಮತ್ತು ಅತಿ  ತೆಳು ಬಟ್ಟೆ ಧರಿಸಿ ಆಡುವುದಕ್ಕೆ ಎಂದೂ ಹಿಂಜರಿಕೆ ತೋರದ ಅಮೇರಿಕದ ಮಹಿಳಾ ಟೆನ್ನಿಸ್ ಸ್ಟಾರ್ ಸೆರೆನಾ ವಿಲಿಯಮ್ಸ್ ಅವರು  ಮೊದಲ ಬಾರಿ ಯೆಂಬAತೆ ದೇಹವಿಡೀ ಮುಚ್ಚುವ ಕಪ್ಪು ಕ್ಯಾಟ್-ಸೂಟ್ ಧರಿಸಿ ಆಡಿದ್ದರು. ಇದು ಫ್ರೆಂಚ್ ಓಪನ್ ಆಯೋಜಕರ  ಆಕ್ಷೇಪಕ್ಕೆ ಗುರಿಯಾಯಿತು. ಇಂಥ ಡ್ರೆಸ್ಸನ್ನು ಒಪ್ಪಲಾಗದು ಎಂದ ಫ್ರೆಂಚ್ ಟೆನ್ನಿಸ್ ಫೆಡರೇಶನ್‌ನ ಅಧ್ಯP್ಷÀ ಬರ್ನಾರ್ಡ್ ಗ್ರೆಡಿಸೆಲ್ಲಿ  ಹೇಳಿದರು. ಮುಂದಿನ ವರ್ಷದಿಂದ ಇಂಥ ಡ್ರೆಸ್ ಧರಿಸಿ ಆಡುವುದನ್ನು ನಿಷೇಧಿಸಲಾಗುವುದು ಎಂದೂ ಹೇಳಿದರು.
1985ರಲ್ಲಿ ಇಂಥz್ದÉÃ ಇನ್ನೊಂದು ಘಟನೆ ನಡೆಯಿತು. ಅದು ವಿಂಬಲ್ಡನ್ ಮಹಿಳಾ ಟೆನ್ನಿಸ್ ಟೂರ್ನಮೆಂಟ್. ಅಮೇರಿಕದ ಆಟಗಾತಿ  ಅನ್ನ ವೈಟ್, ಲಂಗ-ಧಾವಣಿಯAಥ ಉದ್ದ ಸ್ಲೀವ್ ಇರುವ ದಿರಿಸು ಧರಿಸಿ ಪ್ರಥಮ ಸುತ್ತಿನ ಪಂದ್ಯಾಟಕ್ಕೆAದು ಅಂಗಣ ಪ್ರವೇಶಿಸಿದ್ದರು.  ಆಗ ಇದನ್ನು ಪಂದ್ಯದ ರೆಫ್ರಿ ಆಕ್ಷೇಪಿಸಿದ್ದರು. ಇದಕ್ಕಿಂತ ಹೆಚ್ಚು ಸೂಕ್ತವಾದ ಧಿರಿಸು ಧರಿಸಿ ಆಡಬೇಕೆಂದು ತಾಕೀತು ಮಾಡಿದ್ದರು.  ನಿಜವಾಗಿ,
ಅತೀವ ಪ್ರಗತಿಪರರೆಂದು ಜಂಭ ಕೊಚ್ಚಿಕೊಳ್ಳುತ್ತಿರುವ ಈ ರಾಷ್ಟçಗಳ ಮಹಿಳಾ ಶೋಷಕ ನೀತಿಗಳು ಈ ಹೊತ್ತಿನಲ್ಲಿ ಚರ್ಚೆಗೆ ಬರಲು  ಬಹುಮುಖ್ಯ ಕಾರಣ- ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ. ಜರ್ಮನಿಯ ಸಾರಾ ವೋಸ್, ಪೌಲಿನ್ ಸ್ನಾಫೆರ್, ಎ ಲಿಝಬೆತ್ ಸೆಟ್ಸ್ ಮತ್ತು ಕಿಮ್ ಬುಯಿ ಎಂಬ ನಾಲ್ವರು ಪ್ಯಾರಾ ಜಿಮ್ನಾಸ್ಟಿಕ್ ಆಟಗಾರ್ತಿಯರು ಮಾಡಿದ ಘೋಷಣೆ. ನಾವೇನು  ಧರಿಸಬೇಕು ಎಂಬುದನ್ನು ನಾವು ನಿರ್ಧರಿಸಬೇಕೇ ಹೊರತು ಇನ್ನಾರೂ ಅಲ್ಲ ಎಂದು ಹೇಳಿದ ಇವರು, ತುಂಡು ಬಟ್ಟೆಯ ಜಿಮ್ನಾಸ್ಟಿಕ್  ನಿಯಮವನ್ನು ಮುರಿದರು ಮತ್ತು ಸಂಪೂರ್ಣ ದೇಹ ಮುಚ್ಚುವ ಬಾಡಿ ಸೂಟ್ ಧರಿಸಿದರು. ಕ್ರೀಡೆಯನ್ನು ಸೆಕ್ಸಿಸಂ ಮಾಡುವುದಕ್ಕೆ ತಮ್ಮ  ವಿರೋಧ ಇದೆ ಎಂದೂ ಹೇಳಿದರು. ಇದು ಒಲಿಂಪಿಕ್ಸ್ನಲ್ಲಿ ಸಂಚಲನ ಸೃಷ್ಟಿಸಿತು. ಮಹಿಳಾ ಕ್ರೀಡೆಯನ್ನು ಕ್ರೀಡೆಯಾಗಿ  ನೋಡುವುದಕ್ಕಿಂತ ಸೆಕ್ಸಿಸಂ ದಂಧೆಯಾಗಿ ಆಯೋಜಕರು ನೋಡುತ್ತಿz್ದÁರೆ ಎಂಬ ಧ್ವನಿಗೆ ಗಟ್ಟಿ ಬಲವೂ ಬಂತು. ಹೆಣ್ಣು-ಗಂಡು  ಸಮಾನವೆಂದ ಮೇಲೆ ಗಂಡಿಗಿಲ್ಲದ ಬಟ್ಟೆ ನಿಯಮ ಹೆಣ್ಣಿಗ್ಯಾಕೆ ಎಂಬ ಆಕ್ಷೇಪಗಳು ಅನೇಕರಿಂದ ಕೇಳಿ ಬಂದುವು. ವಿಶೇಷವಾಗಿ,
ಜಿಮ್ನಾಸ್ಟಿಕ್, ಬೀಚ್ ವಾಲಿಬಾಲ್ ಮತ್ತು ಬೀಚ್ ಹ್ಯಾಂಡ್ ಬಾಲ್ ಆಟದಲ್ಲಿ ಆಟಗಾರ್ತಿಯರಿಗೆ ಇರುವ ಕಠಿಣ ಧಿರಿಸು ನಿಯಮಗಳು  ಆಟಗಾರರಿಗೆ ಸಂಬAಧಿಸಿದAತೆ ಇಲ್ಲವೇ ಇಲ್ಲ. ಅವರು ತಮಗನುಕೂಲವಾದ ಮೈಗಂಟಿಕೊಳ್ಳದ ಶಾಟ್ಸ್ಗಳನ್ನು ಧರಿಸಿ ಆಡುವುದಕ್ಕೆ ಅ ನುಮತಿ ಇದೆ. ಮತ್ತ್ಯಾಕೆ ಹೆಣ್ಣು ಮಾತ್ರ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಪ್ರಶ್ನೆ ಚರ್ಚೆಗೆ ಒಳಗಾಯಿತಲ್ಲದೇ ಇದು ಹೆಣ್ಣು  ಶೋಷಣೆಯ ಇನ್ನೊಂದು ರೂಪ ಎಂಬAತಹ ವ್ಯಾಖ್ಯಾನಕ್ಕೂ ಒಳಗಾಯಿತು. ಈ ಎಲ್ಲವುಗಳ ಒಟ್ಟು ಮೊತ್ತವೇ ಜರ್ಮನಿಯ  ಜಿಮ್ನಾಸ್ಟಿಕ್ ತಂಡದ ಹೊಸ ಧಿರಿಸು. ಆದರೆ, ಈ ಬೆಳವಣಿಗೆಗೆ ಸಂಬAಧಿಸಿ ಒಲಿಂಪಿಕ್ಸ್ ಅಧಿಕಾರಿಗಳು ಈ ಬಾರಿ ಜಾಗರೂಕತೆಯಿಂದ  ಪ್ರತಿಕ್ರಿಯಿಸಿದರು. ನಮ್ಮದು ಸೆಕ್ಸ್ ಕೇಂದ್ರಿತ ಕ್ರೀಡೆಯಲ್ಲ ಮತ್ತು ಮಹಿಳಾ ಅಥ್ಲೀಟ್‌ಗಳ ದೇಹವನ್ನು ಹತ್ತಿರದಿಂದ ತೋರಿಸುವ ದೇಹಕೇಂ ದ್ರಿತ ಚಿತ್ರೀಕರಣವನ್ನೂ ನಿಲ್ಲಿಸುತ್ತೇವೆ ಎಂದೂ ಹೇಳಿದರು. ಅಷ್ಟಕ್ಕೂ,
ಯಾವುದು ಮಹಿಳಾ ಶೋಷಣೆ, ಯಾವುದು ಪ್ರಗತಿಪರ ಚಿಂತನೆ ಎಂದು ಜಗತ್ತಿಗೆ ಆಗಾಗ ಬೋಧನೆ ಮಾಡುತ್ತಿರುವುದು ಇವೇ  ರಾಷ್ಟçಗಳು. ಮಹಿಳಾ ಶೋಷಣೆ ಮತ್ತು ಅಸಮಾನತೆಯ ಕಾರಣ ಕೊಟ್ಟು ಬುರ್ಖಾವನ್ನು ವಿರೋಧಿಸುವುದಕ್ಕೆ ಮತ್ತು ನಕಾಬನ್ನು ನಿಷೇ ಧಿಸುವುದಕ್ಕೂ ಮುಂದಾಗಿರುವುದು ಇವೇ ರಾಷ್ಟçಗಳು. ದುರಂತ ಏನೆಂದರೆ,
ಈ ಬೋಧಕರ ಒಳಮನಸ್ಸು ಹೊರಗೆ ಕಾಣುವಷ್ಟು ಬಿಳಿಯಲ್ಲ ಮತ್ತು ಹೆಣ್ಣನ್ನು ಮಾರಾಟದ ಸರಕಾಗಿ ಅವರು ಕಾಣುತ್ತಾರೆಯೇ  ಹೊರತು ಇನ್ನೇನೂ ಅಲ್ಲ. ನಿಜವಾಗಿ, ಯಾವ ಕ್ರೀಡೆಗೆ ಯಾವ ರೂಪದ ಬಟ್ಟೆ ಧರಿಸಬೇಕು ಎಂಬುದನ್ನು ನಿಯಮವಾಗಿ ಹೇರುವುದೇ  ಒಂದು ದೊಡ್ಡ ಶೋಷಣೆ. ದಿರಿಸು ಅವರವರ ಆಯ್ಕೆ ಎಂದ ಮೇಲೆ, ಹೆಣ್ಣಿನ ದಿರಿಸಿನ ಅಳತೆ ಇಷ್ಟೇ ಇರಬೇಕು ಎಂದು  ಆe್ಞÁಪಿಸುವುದು ಯಾವ ರೀತಿಯ ಪ್ರಗತಿಪರತೆ? ದಿರಿಸಿಗೂ ಕ್ರೀಡೆಗೂ ಏನು ಸಂಬAಧ? ಕ್ಯಾತಿ ಫ್ರೀಡ್‌ಮನ್ ಎಂಬ ಓಟಗಾತಿ  ಮೈಮುಚ್ಚುವ ಪೂರ್ಣ ದಿರಿಸು ಧರಿಸಿಯೇ 2000ದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕ್ರೀಡಾ ಆಯೋಜಕರ ನೆಚ್ಚಿನ ದಿರಿಸು ನಿಯಮವನ್ನು  ಚಾಚೂ ತಪ್ಪದೇ ಪಾಲಿಸಿದ
ಓಟಗಾರ್ತಿಯರು ಅವರ ಹಿಂದೆ ಇದ್ದರು. ಪೂರ್ಣ ದಿರಿಸು ಧರಿಸಿ ಕ್ಯಾತಿಗೆ ಸಾಧನೆ ಮಾಡಲು ಸಾಧ್ಯವಾಗಿದ್ದರೆ ಮತ್ತು ಜರ್ಮನಿಯ  ಜಿಮ್ನಾಸ್ಟಿಕ್ ಆಟಗಾರ್ತಿಯರು ಪೂರ್ಣ ಧಿರಿಸು ಧರಿಸಿ ತಮ್ಮ ಪ್ರತಿಭೆ ತೋರಬಲ್ಲ ರೆಂದಾದರೆ, ಈ ಬಿಕಿನಿಯನ್ನು ನಿಯಮವಾಗಿ ಜಾರಿಗೆ  ತಂದವರ ಉz್ದÉÃಶವೇನು? ಯಾಕೆ ಆಟಗಾರರಿಗೆ ಈ ನಿಯಮದ ಬಿಗಿತನವಿಲ್ಲ? ಮಹಿಳಾ ಕ್ರೀಡೆಯನ್ನು ಯಾಕೆ ಒಂದು ಕ್ರೀಡೆ ಯಾಗಿ  ಆಸ್ವಾದಿಸಲು ಇವರಿಗೆ ಸಾಧ್ಯವಾಗುವುದಿಲ್ಲ? ಮಹಿಳಾ ಕ್ರೀಡೆಗೆ ಕನಿಷ್ಠ ಬಟ್ಟೆಯನ್ನು ನಿಯಮ ವಾಗಿ ರೂಪಿಸಿ, ಆ ಮೂಲಕ ಕ್ರೀಡೆಯ  ಬದಲು ಕ್ರೀಡಾಳುವಿನ ದೇಹವನ್ನು ಮಾರಾಟ ಮಾಡುವುದು ಯಾಕೆ ಶೋಷಣೆ ಎಂದು ಅನಿಸು ತ್ತಿಲ್ಲ? ಬುರ್ಖಾ ಧರಿಸುವುದನ್ನು  ಶೋಷಣೆ ಎನ್ನುವವರೇ ಬಿಕಿನಿಯನ್ನು ನಿಯಮವಾಗಿ ಹೇರುವುದು ಏಕೆ? ಮತ್ತು ಇದರಲ್ಲಿ ಒಂದು ಶೋಷಣೆಯೂ ಇನ್ನೊಂದು  ಪ್ರಗತಿಪರವೂ ಆಗುವುದು ಹೇಗೆ? ಬುರ್ಖಾದ ವಿರುದ್ಧ ಮಾತೆತ್ತಿದವರೆಲ್ಲ ಮತ್ತು ಖಂಡನೆ-ಮAಡನೆ ಮಾಡಿ ವ್ಯಾಖ್ಯಾನಿಸಿದವರೆಲ್ಲ  ಮಹಿಳಾ ಕ್ರೀಡೆಯಲ್ಲಿ ರುವ ಈ ನಿಯಮಗಳ ಬಗ್ಗೆ ಯಾಕೆ ಜಾಣ ಕುರುಡು ಪ್ರದರ್ಶಿಸುತ್ತಿz್ದÁರೆ? ಅಂದಹಾಗೆ,
ಆಯ್ಕೆ ಸ್ವಾತಂತ್ರö್ಯವನ್ನು ಎತ್ತಿ ಹಿಡಿದ ನಾರ್ವೆ ಆಟಗಾರ್ತಿಯರು ಮತ್ತು ಜರ್ಮನಿಯ ಜಿಮ್ನಾಸ್ಟಿಕ್ ತಾರೆಯರಿಗೆ ಅಭಿನಂದನೆಗಳು.

Monday 2 August 2021

ಈದ್‌ಗೆ ಮುನ್ನ ಶಾಂತಿಸಭೆಯೇಕೆ, ಮನವಿ ಸಲ್ಲಿಕೆಯೇಕೆ?

 




ಮುಸ್ಲಿಮರ ಹಬ್ಬಗಳು ಹತ್ತಿರವಾದಾಗ ಜಿಲ್ಲಾಧಿಕಾರಿಗಳು ಶಾಂತಿಸಭೆಗೆ ಆದೇಶ ಕೊಡುವುದು ಮತ್ತು ಶಾಂತಿಯುತ ಹಬ್ಬಾಚರಣೆಗೆ ಅ ನುವು ಮಾಡಿ ಕೊಡುವಂತೆ ಮುಸ್ಲಿಮ್ ಸಂಘಟನೆಗಳು ಪೊಲೀಸ್ ಕಮೀಷನರ್‌ಗೆ ಮನವಿ ಸಲ್ಲಿಸುವುದೆಲ್ಲ ಇತ್ತೀಚಿನ ವರ್ಷಗಳಲ್ಲಿ  ಸಾಮಾನ್ಯವಾಗಿ ಬಿಟ್ಟಿದೆ. ಈ ಬಾರಿಯ ಈದ್‌ಗೆ ಸಂಬಂಧಿಸಿಯೂ ಈ ಬೆಳವಣಿಗೆ ನಡೆದಿದೆ. ಹಾಗಂತ, ಇಂಥ ಮನವಿಗಳು ಮತ್ತು  ಆದೇಶಗಳ ಅಗತ್ಯ ಏನಿದೆ? ಹಬ್ಬದ ಸಮಯದಲ್ಲಿ ಅಶಾಂತಿ ಉಂಟು ಮಾಡುವವರು ಯಾರು? ಏನವರ ಉದ್ದೇಶ? ಹಬ್ಬದ  ವಾತಾವರಣವನ್ನು ಹಾಳುಗೆಡವುದರಿಂದ ಅವರಿಗೆ ದಕ್ಕುವುದೇನು? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುವುದು ಸಹಜ.

ಈ ದೇಶದಲ್ಲಿ ಆಚರಿಸಲ್ಪಡುವ ಯಾವುದೇ ಹಬ್ಬವು ಕೆಲವು ಮೂಲಭೂತ ಆಚಾರ ಪದ್ಧತಿಗಳನ್ನು ಹೊರತುಪಡಿಸಿ, ಉಳಿದಂತೆ ಎಲ್ಲ  ಧರ್ಮೀಯರೂ ಧರ್ಮಾತೀತವಾಗಿ ಆಚರಿಸುವುದಕ್ಕೆ ಯೋಗ್ಯವಾಗಿರುವಂಥದ್ದು. ರಾಜಕೀಯವು ಧರ್ಮವನ್ನು ದುರುಪಯೋಗಿಸುವುದಕ್ಕಿಂತ ಮೊದಲು ಈ ಕೂಡು ಆಚರಣೆ ಈ ದೇಶದ ವೈಶಿಷ್ಟ್ಯವೂ ಆಗಿತ್ತು. ಹಾಗಂತ,
ಈಗ ಇಲ್ಲ ಎಂದಲ್ಲ. ಇದೆ. ಆದರೆ ನಾಲ್ಕೈದು  ದಶಕಗಳ ಹಿಂದಿನ ವಾತಾವರಣಕ್ಕೆ ಹೋಲಿಸಿದರೆ ಈಗ ಈ ವಾತಾವರಣದಲ್ಲಿ ಸಾಕಷ್ಟು  ಬದಲಾವಣೆಯಾಗಿದೆ. ಹಬ್ಬಗಳ ಕೂಡು ಆಚರಣೆಗೆ ಭಂಗ ಎದುರಾಗಿದೆ. ಹಿಂದೂಗಳ ಹಬ್ಬ, ಜಾತ್ರೆ ಅಥವಾ ಸಂತೋಷ ಕೂಟಗಳಲ್ಲಿ  ಮುಸ್ಲಿಮರು ಭಾಗವಹಿಸುವುದನ್ನು ನಿರಾಕರಣೆಯ ಭಾವದಲ್ಲಿ ನೋಡುವ ಸಂಗತಿಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ಏನು? ಈ  ಗೋಡೆಯನ್ನು ಕೆಡವುವುದು ಹೇಗೆ, ಯಾರು? ಇಲ್ಲಿ ಇನ್ನೂ ಒಂದು ಬಹುಮುಖ್ಯ ಸಂಗತಿ ಇದೆ.

ಮುಸ್ಲಿಮರ ಹಬ್ಬಗಳಿಗೆ ಹೋಲಿಸಿದರೆ ಹಿಂದೂ ಸಮುದಾಯದಲ್ಲಿ ಹಬ್ಬಗಳು ಅನೇಕ. ಮುಸ್ಲಿಮರಿಗೆ ಎರಡು ಹಬ್ಬಗಳಷ್ಟೇ ಇವೆ. ಆದರೆ  ಮುಸ್ಲಿಮರಂತೆ ಹಿಂದೂ ಸಮುದಾಯದ ಸಂಘಟನೆಗಳೂ ಹಬ್ಬಗಳ ಸಮಯದಲ್ಲಿ ಪೊಲೀಸ್ ಕಮೀಷನರ್‌ಗೆ ಮನವಿ ಸಲ್ಲಿಸುವ  ಬೆಳವಣಿಗೆ ನಡೆಯುತ್ತಿಲ್ಲ. ಜಿಲ್ಲಾಧಿಕಾರಿಯವರು ಶಾಂತಿಸಭೆಗೆ ಕರೆ ಕೊಡುವ ಪ್ರಸಂಗವೂ ನಡೆಯುತ್ತಿಲ್ಲ. ಅಂದರೆ, ಮುಸ್ಲಿಮರ  ಹಬ್ಬಾಚರಣೆಗೆ ಸಂಬಂಧಿಸಿ ಇಲ್ಲೊಂದು ಅನುಮಾನದ ವಾತಾವರಣ ಇದೆ. ಭಯವನ್ನು ಹುಟ್ಟು ಹಾಕಲಾಗಿದೆ. ಅವರ ಸಂತೋಷ  ಕೂಟಕ್ಕೆ ಎಲ್ಲಿಂದಲೋ ಯಾರೋ ಅಡ್ಡಿಪಡಿಸಲಿದ್ದಾರೆ ಎಂಬ ಪರಿಸ್ಥಿತಿ ಇದೆ. ಹಿಂದೂಗಳ ಹಬ್ಬಗಳಿಗೆ ಇಲ್ಲದ ಭಯವನ್ನು ಮುಸ್ಲಿಮರ  ಹಬ್ಬಾಚರಣೆಗೆ ಇರುವಂತೆ ಮಾಡುತ್ತಿರುವವರು ಯಾರು? ಯಾಕೆ? ಈ ಬಗೆಯ ಅಡ್ಡಿಯಿಂದ ಅವರು ಪಡಕೊಳ್ಳುತ್ತಿರುವುದೇನು?

ದೇಶಕ್ಕೆ ಸ್ವಾತಂತ್ರ‍್ಯ ಲಭಿಸುವಾಗ ಈ ದೇಶದ ನಾಗರಿಕರಲ್ಲಿ ಖುಷಿ ಮತ್ತು ದುಃಖಗಳೆರಡೂ ಇದ್ದುವು. ನಾವು ಸ್ವತಂತ್ರರು ಎಂಬುದು  ಖುಷಿಗೆ ಕಾರಣವಾದರೆ, ದೇಶ ವಿಭಜನೆಯಾಯಿತು ಎಂಬುದು ದುಃಖಕ್ಕೆ ಕಾರಣ. ದುಃಖ ಎಷ್ಟು ತೀವ್ರವಾಗಿ ಈ ದೇಶೀಯರನ್ನು  ಕಾಡಿತೆಂದರೆ, ಖುಷಿಯನ್ನೇ ಅನುಭವಿಸಲಾಗದಷ್ಟು. ಮುಸ್ಲಿಮ್ ಮತ್ತು ಹಿಂದೂ ಎಂಬ ಗುರುತಿರುವ ಮನುಷ್ಯರ ಮಾರಣ ಹೋಮ  ನಡೆಯಿತು. ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸಾಯಿಸಿದರು. ಹೀಗೆ ಸಾಯುವವರ ನೋವಲ್ಲಾಗಲಿ,  ರಕ್ತದ ಬಣ್ಣದಲ್ಲಾಗಲಿ, ದೇಹ ಪ್ರಕೃತಿಯಲ್ಲಾಗಲಿ, ಹಸಿವು-ಬಾಯಾರಿಕೆ, ಸಂಕಟದಲ್ಲಾಗಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಚೂರಿಯನ್ನು  ಚುಚ್ಚಿಸಿಕೊಂಡ ಹಿಂದೂವಿನದ್ದಾಗಲಿ ಮುಸ್ಲಿಮನದ್ದಾಗಲಿ ಆರ್ತನಾದ ಒಂದೇ. ಹರಿಯುತ್ತಿದ್ದ ರಕ್ತದ ಬಣ್ಣ ಒಂದೇ. ಎರಡು ಕೈ, ಎರಡು  ಕಾಲು, ಎರಡು ಕಣ್ಣು, ಒಂದು ಬಾಯಿ, ಒಂದು ಮೂಗು.. ಹೀಗೆ ಸಾಯುವವರು ಮತ್ತು ಸಾಯಿಸುವವರ ನಡುವೆ ವ್ಯತ್ಯಾಸವೂ ಇರ ಲಿಲ್ಲ. ಮತ್ತೇಕೆ ಅವರು ಪರಸ್ಪರ ಇರಿದುಕೊಂಡರು. ಎಂದರೆ,

ದೇಶವಿಭಜನೆಯ ಹೆಸರಲ್ಲಿ ಅವರ ನಡುವೆ ಹುಟ್ಟು ಹಾಕಲಾಗಿದ್ದ ಧರ್ಮದ್ವೇಷ. ಬ್ರಿಟಿಷರು ಮತ್ತು ಅಂದಿನ ರಾಜಕೀಯ ನಾಯಕರ  ತಂತ್ರ-ಕುತಂತ್ರ, ದುರುದ್ದೇಶಗಳ ಕಾರಣಕ್ಕಾಗಿ ದೇಶ ವಿಭಜನೆಗೊಂಡರೂ ಅದರ ಹೊಣೆಗಾರಿಕೆಯನ್ನು ಅವರು ಮುಸ್ಲಿಮರು ಮತ್ತು  ಹಿಂದೂಗಳ ಮೇಲೆ ಹೊರಿಸಿದರು. ದ್ವೇಷ ಬಿತ್ತಿದರು. ಸ್ವಾತಂತ್ರ‍್ಯಪೂರ್ವದಲ್ಲೇ  ಎರಡೂ ಸಮುದಾಯಗಳ ನಡುವೆ ಈ ದ್ವೇಷ ಭಾವವನ್ನು  ಹುಟ್ಟು ಹಾಕಲಾಗಿತ್ತಾದ್ದರಿಂದ ವಿಭಜನೆಯ ಸಮಯದಲ್ಲಿ ಅದನ್ನು ಪರಾಕಾಷ್ಟೆಗೆ ತಲುಪಿಸುವುದು ಕಷ್ಟವಾಗಲಿಲ್ಲ. ಸ್ವಾತಂತ್ರ‍್ಯಾನಂತರವೂ ಈ  ಭಯವನ್ನು ತಾಜಾವಾಗಿಟ್ಟು ಕೊಳ್ಳುವ ಶ್ರಮಗಳು ನಡೆಯುತ್ತಾ ಬಂದುವು. ಮುಸ್ಲಿಮ್ ವ್ಯಕ್ತಿಯ ತಪ್ಪುಗಳನ್ನು ಇಡೀ ಧರ್ಮದ ತ ಪ್ಪುಗಳಾಗಿ ಬಿಂಬಿಸುವುದು ಮತ್ತು ಆ ಮೂಲಕ ಜನರ ಭಾವನೆಗಳಿಗೆ ಕಿಚ್ಚಿಡುವುದು ನಡೆಯತೊಡಗಿತು. ಇವು ನಿಧಾನಕ್ಕೆ ಫಲ ಕೊಡುವ  ಸೂಚನೆಗಳು ಲಭ್ಯವಾಗತೊಡಗಿದಂತೆಯೇ ದ್ವೇಷ ಭಾಷಣಗಳು ಹೆಚ್ಚತೊಡಗಿದುವು. ಪ್ರೇಮವು ಲವ್‌ಜಿಹಾದ್ ಆಯಿತು. ಭಯೋತ್ಪಾದ ನೆಯು ಜಿಹಾದ್ ಆಯಿತು. ಮುಸ್ಲಿಮರ ವೇಷ-ಭೂಷಣಗಳು, ಆಹಾರ ಕ್ರಮ, ಧಾರ್ಮಿಕ ನಿಯಮಾವಳಿಗಳು, ಮದ್ರಸ-ಬಾಂಗ್... ಹೀಗೆ  ಒಂದೊಂದನ್ನೇ ಮುನ್ನೆಲೆಗೆ ತಂದು, ಅವುಗಳಿಗೆ ಕೋರೆ ಹಲ್ಲುಗಳನ್ನೂ ಚೂಪು ಉಗುರುಗಳನ್ನೂ ತೊಡಿಸಿ, ವಿಕೃತಗೊಳಿಸಿ ಹಂಚುವ  ಪ್ರಕ್ರಿಯೆಗಳು ನಡೆದುವು. ರಾಜ ಕೀಯವಾಗಿ ಇವು ಲಾಭದಾಯಕ ಎಂದು ಸ್ಪಷ್ಟವಾಗುತ್ತಿದ್ದಂತೆಯೇ ಹೀಗೆ ಹಿಂದೂ ಮುಸ್ಲಿಮರನ್ನು  ಪರಸ್ಪರ ಅನ್ಯಗೊಳಿಸುವ ವಿಷಯಗಳನ್ನು ಹುಡುಕಿ ಹುಡುಕಿ ಮುನ್ನೆಲೆಗೆ ತರಲಾಯಿತು. ಅದರಲ್ಲಿ ಹಬ್ಬಗಳೂ ಒಂದು. ನಮ್ಮ ಹಬ್ಬ- ಹರಿದಿನ-ಜಾತ್ರೆಗಳಲ್ಲಿ ಅವರ ಉಪಸ್ಥಿತಿಯೇಕೆ ಎಂಬ ಪ್ರಶ್ನೆಯೊಂದನ್ನು ಹುಟ್ಟು ಹಾಕಿ, ಅವರ ಉಪಸ್ಥಿತಿಯೇ ಅಪಾಯಕಾರಿ ಎಂಬಲ್ಲಿ  ವರೆಗೆ ಅದನ್ನು ಉಬ್ಬಿಸಿ ಹಂಚುವಲ್ಲಿಗೆ ಹಬ್ಬಗಳೂ ವಿಭಜನೆಯಾದವು. ಇದರಿಂದಾಗಿ ಇವತ್ತು ಹೊಸ ತಲೆಮಾರು ನಾವು ಮತ್ತು ಅವರು  ಎಂಬAತಹ ವಿಭಜನೆಯೊಂದಕ್ಕೆ ಸಾಕ್ಷಿಯಾಗುತ್ತಿದೆ. ನಮ್ಮ ಹಬ್ಬ, ನಮ್ಮ ಖುಷಿ, ನಮ್ಮ ಸಂತೋಷ... ಎಂಬಂತಹ ಅಲಿಖಿತ  ಬೌಂಡರಿಯೊಂದು ನಿರ್ಮಾಣವಾಗುತ್ತಿದೆ. ಇದು ಪರಸ್ಪರರ ನಡುವೆ ಅನುಮಾನದ ವಾತಾವರಣಕ್ಕೂ ಕಾರಣವಾಗುತ್ತಿದೆ. ಅಂದಹಾಗೆ,

ಈ ಅನುಮಾನದ ಗೋಡೆ ಅಪಾಯಕಾರಿ. ಇದನ್ನು ಬೀಳಿಸಲೇಬೇಕು. ಇದಕ್ಕಿರುವ ಅತ್ಯುತ್ತಮ ದಾರಿಯೆಂದರೆ, ಹಿಂದೂ ಮತ್ತು  ಮುಸ್ಲಿಮರು ಹಬ್ಬಗಳಂತಹ ಸಂತೋಷ ಕೂಟಗಳನ್ನು ಪರಸ್ಪರ ಜೊತೆಗೂಡಿ ಆಚರಿಸುವುದು. ಇಂತಹ ಕಲೆಯುವಿಕೆಯಿಂದ  ಸಂತೋಷದ ಹಂಚಿಕೆಯಷ್ಟೇ ವಿನಿಮಯವಾಗುವುದಲ್ಲ, ಪರಸ್ಪರರ ನಡುವೆ ಮಾತು-ಕತೆಗಳೂ ನಡೆಯುತ್ತವೆ. ಸುಖ-ದುಃಖಗಳ  ಆಮದು-ರಫ್ತುಗಳೂ ಆಗುತ್ತವೆ. ಇಂದಿನ ಅಗತ್ಯ ಇದು. ನಿಜವಾಗಿ,

ಹಬ್ಬ ಅಂದರೆ ಆತಂಕ ಅಲ್ಲ, ಸಂತೋಷ. ಈ ಸಂತೋಷವನ್ನು ಅನುಭವಿಸುವುದಕ್ಕೆ ಹಿಂದೂ-ಮುಸ್ಲಿಮರು ಜೊತೆಯಾಗಿ  ಸಿದ್ಧಗೊಳ್ಳಬೇಕೇ ಹೊರತು ಶಾಂತಿ ಸಭೆಗಲ್ಲ. ಆದರೆ ಬರಬರುತ್ತಾ ಹಬ್ಬಗಳು ಆತಂಕದ ದಿನಗಳಾಗಿ ಮೂಡತೊಡಗಿವೆ. ನಾವು ಮತ್ತು  ಅವರು ಎಂಬ ವಿಭಜನೆಗೆ ಕಾರಣವಾಗುತ್ತಿದೆ. ಈ ವಾತಾವರಣ ತಿಳಿಯಾಗಬೇಕು. ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ವಿಶ್ವಾಸ ದಿಂದ ಬದುಕುವ ಸ್ಥಿತಿ ನಿರ್ಮಾಣವಾಗಬೇಕು. ಯಾರು ಪರಸ್ಪರರನ್ನು ಅನ್ಯಗೊಳಿಸುತ್ತಾರೋ ಅವರನ್ನು ದೂರವಿಟ್ಟು ಹಿಂದೂ- ಮುಸ್ಲಿಮರು ಜೊತೆಯಾಗಿ ಬದುಕುವಂತಾಗಬೇಕು. ಹಬ್ಬಗಳು ಅದಕ್ಕಿರುವ ಒಂದು ಕಿಂಡಿ. ಈ ಕಿಂಡಿ ಮುಚ್ಚದಿರಲಿ.